ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಹೀಗೆ ಮಾಡಿ

ಸೋಮವಾರ, 15 ಏಪ್ರಿಲ್ 2019 (09:02 IST)
ಬೆಂಗಳೂರು : ಕೆಲವರು ಹಲ್ಲಿನಲ್ಲಿ ಸಿಲುಕಿಕೊಂಡ ಆಹಾರವನ್ನು ತೆಗೆದುಹಾಕಲು ಗಟ್ಟಿಯಾಗಿ ಬ್ರೆಶ್ ನಿಂದ ಹಲ್ಲನ್ನು ಉಜ್ಜುತ್ತಾರೆ. ಇದರಿಂದ ಒಸಡಿನಲ್ಲಿ ರಕ್ತ ಬರುತ್ತದೆ. ವಸಡಿನ ಸೂಕ್ಷ್ಮ ರಕ್ತನಾಳಗಳು ತೆರೆದುಕೊಳ್ಳುವುದರಿಂದ  ರಕ್ತ ಬರುತ್ತದೆ. ಇದನ್ನು ಕಡಿಮೆ ಮಾಡಲು ತಕ್ಷಣ ಹೀಗೆ ಮಾಡಿ.


*ಎಲ್ಲಕ್ಕೂ ಮೊದಲು ಮಾಡಬೇಕಾದ ಕಾರ್ಯವೆಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಉಪ್ಪು (ಕಲ್ಲುಪ್ಪು ಆದರೆ ಉತ್ತಮ) ಹಾಕಿ ಬಾಯಿಯನ್ನು ಮುಕ್ಕಳಿಸುವುದು.


*ಪುದೀನ ಎಣ್ಣೆ ಬ್ಯಾಕ್ಟೀರಿಯಾಗಳನ್ನು ಕೊಂದು ಊತವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಅಲ್ಲದೇ ಇದರ ಸುವಾಸನೆ ಬಾಯಿಯ ದುರ್ವಾಸನೆಯನ್ನು ದೂರವಾಗಿಸುತ್ತದೆ. ಇದನ್ನು ಸ್ವಲ್ಪ ನೀರಿಗೆ ಹಾಕಿಕೊಂಡು ಅದರಿಂದ ಬಾಯಿ ಮುಕ್ಕಳಿಸಿದರೆ ರಕ್ತ ಬರುವುದು ನಿಲ್ಲುತ್ತದೆ.


ಲ್ಯಾವೆಂಡರ್ ಎಣ್ಣೆ ಉತ್ತಮ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಈ ಎಣ್ಣೆಯನ್ನು ಒಸಡುಗಳ ಮೇಲೆ ಮಸಾಜ್ ಮಾಡುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ