ಅತಿ ಹೆಚ್ಚು ಬಾರಿ ಸ್ನಾನ ಮಾಡಿದರೆ ಆರೋಗ್ಯ ಹಾಳಾಗುತ್ತದೆಯಂತೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ

ಮಂಗಳವಾರ, 14 ಮೇ 2019 (07:20 IST)
ಬೆಂಗಳೂರು : ಸ್ನಾನ ಮಾಡಿದರೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾಗಿ ಸ್ನಾನ ಮಾಡಿದರೆ ಅನೇಕ ಆರೋಗ್ಯ ತೊಂದರೆಗಳಿಗೆ ಉಂಟಾಗುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.




ಹೌದು ಉಟಾ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ ನಮ್ಮ ದೇಹದಲ್ಲಿ ಅಗತ್ಯವಾದ ಬ್ಯಾಕ್ಟೀರಿಯಾ, ವೈರಸ್ ಮತ್ತಿತರ ಮೈಕ್ರೋಬ್(ಜೀವಾಣು)ಗಳಿರುತ್ತವೆ. ಇವು ದೇಹದ ವಿವಿಧ ಪ್ರಕ್ರಿಯೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ರೋಗಗಳನ್ನು ತಡೆಗಟ್ಟುವ ಶಕ್ತಿ ಈ ಸೂಕ್ಷ್ಮಜೀವಿಗಳಿಗಿರುತ್ತವೆ. ನಾವು ಹೆಚ್ಚೆಚ್ಚು ಸ್ನಾನ ಮಾಡಿದರೆ ಈ ಜೀವಾಣುಗಳ ವ್ಯವಸ್ಥೆ ಏರುಪೇರಾಗುತ್ತದೆ. ಇದರಿಂದ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ, ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಹೃದಯದ ತೊಂದರೆಗೂ ಎಡೆ ಮಾಡಿಕೊಡಬಹುದು ಎಂದು ಹೇಳುತ್ತಾರೆ.


ದಕ್ಷಿಣ ಅಮೆರಿಕದ ಅಮೇಜಾನ್ ವ್ಯಾಪ್ತಿಗೆ ಬರುವ ಯಾನೋಮಾಮಿ ಎಂಬ ಗ್ರಾಮದಲ್ಲಿ ಜನರು ಸ್ನಾನ ಮಾಡುವುದು ಕಡಿಮೆಯಂತೆ. ಇದರಿಂದ ಅವರು ಯಾವಾಗಲೂ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಪ್ರತಿದಿನ ಒಂದು ಬಾರಿ ಸ್ನಾನ ಮಾಡಿ ಆದರೆ ದಿನದಲ್ಲಿ ಹಲವು ಬಾರಿ ಸ್ನಾನ ಮಾಡಬೇಡಿ ಎಂದು ಸಂಶೋಧನಕರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ