ಸುಂದರವಾದ, ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ಹೀಗೆ ಮಾಡಿ
ಗುರುವಾರ, 1 ಆಗಸ್ಟ್ 2019 (09:00 IST)
ಬೆಂಗಳೂರು : ಕೂದಲು ಕೂಡ ಹೆಣ್ಣಿನ ಅಂದ ಹೆಚ್ಚಿಸುತ್ತದೆ. ಆದ್ದರಿಂದ ಹುಡುಗಿಯರು ಉದ್ದವಾದ, ಸುಂದರವಾದ ಕೂದಲು ನಮ್ಮದಾಗಬೇಕೆಂದು ಬಯಸುತ್ತಾರೆ. ಹಾಗಾದ್ರೆ ಕೂದಲು ಉದ್ದವಾಗಿ, ಥಳಥಳ ಹೊಳೆಯುವಂತೆ ಇರಬೇಕೆಂದರೆ ಕೂದಲಿಗೆ ಇವುಗಳನ್ನು ಹಚ್ಚುವುದನ್ನು ಮರೆಯಬೇಡಿ.
* ಕಂಡೀಷನಿಂಗ್ ಪ್ರತೀ ಬಾರಿ ಕೂದಲು ತೊಳೆದುಕೊಂಡ ಮೇಲೆ ಕಂಡೀಷನಿಂಗ್ ಮಾಡಿಕೊಳ್ಳಿ. ಇದರಿಂದ ಸೀಳು ಕೂದಲು ಮಾಯವಾಗುವುದಲ್ಲದೆ, ಕೂದಲಿನ ಬೇರು ಗಟ್ಟಿಯಾಗಿ ಹೆಚ್ಚು ಕೂದಲು ಬೆಳೆಯುತ್ತದೆ.
* ಪ್ರತಿಬಾರಿ ತಲೆಸ್ನಾನ ಮಾಡುವ ಮುಂಚೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿ. ಎಣ್ಣೆ ಹಾಕಿ ಮಸಾಜ್ ಮಾಡುವಾಗ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬಳಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
*ಹಾಗೇ ಕೂದಲಿಗೆ ಕತ್ತರಿ ಹಾಕಿದಷ್ಟು ಅದು ಹೆಚ್ಚು ಉದ್ದವಾಗಿ ಬೆಳೆಯುತ್ತದೆ ಎನ್ನುವುದನ್ನು ಮರೆಯಬೇಡಿ.