ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಹೀಗೆ ಮಾಡಿ
ಶನಿವಾರ, 10 ಆಗಸ್ಟ್ 2019 (08:47 IST)
ಬೆಂಗಳೂರು : ಹುಡುಗಿಯರಿಗೆ ತಾವು ಅಂದವಾಗಿ ಕಾಣಬೇಕು ಎಂಬ ಹಂಬಲ ಇರುತ್ತದೆ. ಅದರಲ್ಲೂ ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗುವಾಗ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂದು ಅತಿಯಾಗಿ ಮೇಕಪ್ ಮಾಡಿಕೊಂಡು ಮುಖದ ಅಂದವನ್ನು ಕೆಡಿಸಿಕೊಳ್ಳುತ್ತಾರೆ. ಅದರ ಬದಲು ನೀವು ಮನೆಯಲ್ಲಿ ಈ ಸರಳ ಉಪಾಯದಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.
2 ಚಮಚ ಜೇನುತುಪ್ಪ, 2 ಚಮಚ ಕಿತ್ತಳೆ ರಸ, ಒಂದು ಚಮಚ ಸಕ್ಕರೆ, ಎರಡು ಚಮಚ ನಿಂಬೆ ರಸ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖವನ್ನು ಸ್ವಚ್ಛವಾಗಿ ತೊಳೆದು ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಕೆಲವೇ ನಿಮಿಷದಲ್ಲಿ ನಿಮ್ಮ ಮುಖ ಹೊಳಪು ಪಡೆಯಲಿದೆ. ಇದರಿಂದ ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣುತ್ತೀರಿ.