ನಿಮ್ಮ ಲಿವರ್ ಶುದ್ಧವಾಗಿರಬೇಕೆಂದರೆ ಇದನ್ನು ತಿನ್ನಿ

ಸೋಮವಾರ, 28 ಜನವರಿ 2019 (07:18 IST)
ಬೆಂಗಳೂರು : ಮನುಷ್ಯ ದೇಹದಲ್ಲಿ ಬಹು ಮುಖ್ಯವಾದ ಭಾಗಗಳಲ್ಲಿ ಲಿವರ್ ಕೂಡ ಒಂದು. ಈ ಲಿವರ್ ಶುದ್ಧವಾಗಿದ್ದರೆ ಮನಷ್ಯ ಕೂಡ ಆರೋಗ್ಯವಾಗಿರುತ್ತಾನೆ. ಆದರೆ ಮದ್ಯಪಾನ ಮಾಡುವುದರಿಂದ ಲಿವರ್ ಹಾಳಾಗುತ್ತದೆ. ಇದರಿಂದ ಮನುಷ್ಯನಿಗೆ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಈ ಲಿವರ್ ನ್ನು ನೈಸರ್ಗಿಕವಾಗಿ ಮನೆಯಲ್ಲೇ ಹೇಗೆ ಶುದ್ಧಿಕರೀಸುವುದು ಎಂಬುದನ್ನು ತಿಳಿಯೋಣ.


ಕಡಲೆಕಾಳು 50ಗ್ರಾಂ ತೆಗೆದುಕೊಂಡು ಅದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ನೀರು ಹಾಕಿ ಇದಕ್ಕೆ 3 ಗ್ರಾಂನಷ್ಟು ಸೈಂದವ ಲವಣ ಅಥವಾ ಕಲ್ಲುಪ್ಪು ಹಾಕಿ  ಬೇಯಿಸಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಹೀಗೆ 15 ದಿನ ಮಾಡಿ.


ಆಮೇಲೆ 16 ನೇ ದಿನದಿಂದ  30 ದಿನದ ತನಕ ಕಡಲೆಕಾಳನ್ನು ಹುರಿದುಕೊಂಡು ಇದಕ್ಕೆ 3 ಗ್ರಾಂನಷ್ಟು ಸೈಂದವ ಲವಣ ಅಥವಾ ಕಲ್ಲುಪ್ಪು ಹಾಕಿ ಮಿಕ್ಸ್ ಮಾಡಿ ತಿನ್ನಬೇಕು. ಹೀಗೆ ಮಾಡಿದ್ರೆ ಲಿವರ್ ಕ್ಲೀನ್ ಆಗುತ್ತೆ. ಅದರ ಜೊತೆಗೆ ಖಾರ ತಿನ್ನಬಾರದು ಹಾಗೇ ಮದ್ಯಪಾನ , ಧೂಮಪಾನ, ತಂಬಾಕು ಯಾವುದನ್ನು ಸೇವಿಸಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ