ಕಾಳು ಮೆಣಸು ತಿಂದರೆ ಕ್ಯಾನ್ಸರ್ ಕೂಡಾ ದೂರ!

ಶನಿವಾರ, 14 ಜನವರಿ 2017 (09:04 IST)
ಬೆಂಗಳೂರು: ಭಾರತೀಯ ಸುಗಂಧ ದ್ರವ್ಯಗಳಿಗೆ ಎಂತಹಾ ಶಕ್ತಿಯಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದಲ್ಲಿ ಸಿಗುವ ಕಪ್ಪು ಕಾಳು ಮೆಣಸಿನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯಿದೆ ಎಂದು ನೂತನ ಸಂಶೋಧನೆ ತಿಳಿಸಿದೆ.

ಇದು ಸದ್ಯದಲ್ಲೇ ಕ್ಯಾನ್ಸರ್ ನಿರ್ಮೂಲನೆಯ ಔಷಧಿಯಲ್ಲಿ ಬಳಕೆಯಾಗಲಿದೆಯಂತೆ.ಟ್ಯೂಮರ್ ನಲ್ಲಿ ಸಾಮಾನ್ಯವಾಗಿ ಕಂಡುಬರುವ ಎಂಝೈಮ್ ನ್ನು ಕರಗಿಸುವಲ್ಲಿ ಈ ಕಾಳುಮೆಣಸು ಪ್ರಧಾನ ಪಾತ್ರ ವಹಿಸುತ್ತವೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ಯುಟಿ ಸೌತ್ ವೆಸ್ಟರ್ನ್ ವಿವಿಯ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರೆ. ಕಾಳುಮೆಣಸಿನಲ್ಲಿ ಸ್ತನ, ಶ್ವಾಸಕೋಶ, ಕೊಲನ್, ಲ್ಯುಕೋಮಿಯಾ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯಿರುವುದಾಗಿ ಸಂಶೋಧಕರು ಹೇಳುತ್ತಾರೆ. ಈಗಲೇ ಭಾರತೀಯ ಕಾಳುಮೆಣಸಿನ ಬೆಲೆ ಗಗನದಲ್ಲಿದೆ. ಇದೊಂದು ಯಶಸ್ವಿಯಾದರೆ, ಚಿನ್ನದ ಬೆಲೆ ಬರುವುದಂತೂ ಗ್ಯಾರಂಟಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ