ರಾತ್ರಿ ಕಾಲಿಫ್ಲವರ್ ತಿಂದರೆ ಗ್ಯಾಸ್ಟ್ರಿಕ್ ಆಗುತ್ತಾ?

Krishnaveni K

ಬುಧವಾರ, 17 ಜನವರಿ 2024 (13:49 IST)
Photo Courtesy: Twitter
ಬೆಂಗಳೂರು: ಕೆಲವೊಂದು ತರಕಾರಿಗಳನ್ನು ರಾತ್ರಿ ಹೊತ್ತು ಸೇವಿಸಿದರ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬರುತ್ತದೆ ಎನ್ನಲಾಗುತ್ತದೆ. ಅವುಗಳಲ್ಲಿ ಒಂದು ಕಾಲಿಫ್ಲವರ್.

ಸೊಪ್ಪು ತರಕಾರಿ ವರ್ಗಕ್ಕೆ ಸೇರಿದ ಕಾಲಿಫ್ಲವರ್ ನಲ್ಲಿ ಅನೇಕ ವಿಟಮಿನ್ ಅಂಶಗಳಿವೆ. ಗೋಬಿ ಮಂಚೂರಿಯಿಂದ ಹಿಡಿದು, ಕರಿವರೆಗೆ ಕಾಲಿಫ್ಲವರ್ ನಿಂದ ಅನೇಕ ರುಚಿಕರ ಆಹಾರ ತಯಾರಿಸಬಹುದು.

ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶಗಳೂ ಹೆಚ್ಚು ಇರುತ್ತದೆ. ಹೀಗಾಗಿ ಹೊಟ್ಟೆ ಉಬ್ಬರಕ್ಕೆ ಕಾರಣವಾಗುವ ಸಾಧ‍್ಯತೆಗಳಿವೆ. ರಾತ್ರಿ ನಮ್ಮ ದೇಹಕ್ಕೆ ಚಟುವಟಿಕೆಯಿರುವುದಿಲ್ಲ. ಹೀಗಾಗಿ ರಾತ್ರಿ ಹೊತ್ತು ಕಾಲಿಫ್ಲವರ್ ಸೇವಿಸಿದರೆ ಅಜೀರ್ಣ ಸಮಸ್ಯೆ ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಇದೇ ಜಾತಿಗೆ ಸೇರಿದ ಎಲೆಕೋಸು ಅಥವಾ ಕ್ಯಾಬೇಜ್ ಕೂಡಾ ರಾತ್ರಿ ಹೊತ್ತು ಸೇವಿಸುವುದರಿಂದ ಅಜೀರ್ಣ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ