ತುಪ್ಪ ತಿಂದರೆ ದಪ್ಪಗಾಗುವುದು ನಿಜಾನಾ?!

ಭಾನುವಾರ, 17 ಸೆಪ್ಟಂಬರ್ 2017 (08:23 IST)
ಬೆಂಗಳೂರು: ತುಪ್ಪ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರೆ ತಿಂದರೆ ದಪ್ಪಗಾಗುತ್ತೀವಿ ಎಂಬ ಭಯ ಕೆಲವರಿಗೆ. ಆದರೆ ಅದೆಲ್ಲಾ ನಿಜಾನಾ? ತುಪ್ಪ ತಿನ್ನುವುದರ ಲಾಭವೇನು? ನೋಡೋಣ.


ತೂಕ ಇಳಿಸುತ್ತದೆ!
ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು ಶುದ್ಧ ತಪ್ಪು ನಂಬಿಕೆ. ಅಸಲಿಗೆ ತುಪ್ಪ ದೇಹ ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ. ಇದರಲ್ಲಿರುವ ಒಳ್ಳೆಯ ಕೊಬ್ಬಿನಂಶ ನಮ್ಮ ಶರೀರಕ್ಕೆ ಅಗತ್ಯವಾಗಿದೆ. ಇದರಲ್ಲಿರುವ ಅಮಿನೋ ಆಸಿಡ್ ಕೊಬ್ಬಿನ ಕಣಗಳನ್ನು ಚಿಕ್ಕದಾಗಿ ವಿಂಗಡಿಸುತ್ತದೆ. ಇದರಿಂದ ನಮ್ಮ ದೇಹ ತೂಕ ಇಳಿಸಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.

ಅಷ್ಟೇ ಅಲ್ಲ ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಇದರಲ್ಲಿರುವ ಅಮಿನೋ ಆಸಿಡ್ ನ್ನು ಪಿತ್ತಜನಕಾಂಗ ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಕರಗಿಸುತ್ತದೆ. ಹಾಗಾಗಿ ತುಪ್ಪ ತಿನ್ನಲು ಹಿಂಜರಿಯುವವರು ಇನ್ನು ಧಾರಾಳವಾಗಿ ತಿನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ