ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆಯೇ? ಈ ಬಗ್ಗೆ ತಜ್ಞರು ಹೇಳಿದ್ದೇನು?

ಶುಕ್ರವಾರ, 20 ಏಪ್ರಿಲ್ 2018 (16:32 IST)
ಬೆಂಗಳೂರು : ಕೆಲವು ಪುರುಷರು ಹೆಲ್ಮೆಟ್ ಹಾಕದೆ ಪ್ರಯಾಣ ಬೆಳೆಸುತ್ತಾರೆ.ಇದರಿಂದ ಅವರ ಜೀವಕ್ಕೆ ಮಾರಕ ಎಂದು ಗೊತಾದ ಮೇಲೆಯೂ ಅವರು ಹೀಗೆ ಮಾಡುತ್ತಾರೆ.ಇದಕ್ಕೆ ಅವರು ಕೊಡುವ ರೀಸನ್ ಎಂದು ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ ಎಂದು. ಆದರೆ ಇದು ನಿಜವಲ್ಲ ಎಂದು ವಿಶೇಷಜ್ಞರು ತಿಳಿಸಿದ್ದಾರೆ.  


ವೈದ್ಯರು ತಿಳಿಸಿರುವಂತೆ ಹೆಲ್ಮೆಟ್‌, ಕ್ಯಾಪ್‌, ಹ್ಯಾಟ್‌ ಅಥವಾ ಹೆಡ್‌ ಗೇರ್‌ಗಳನ್ನು ಬಳಕೆ ಮಾಡುವುದರಿಂದ ಯಾವುದೆ ರೀತಿಯ ಕೂದಲಿನ ಸಮಸ್ಯೆ ಕಾಡೋದಿಲ್ಲ. ಆದರೆ ಹೆಚ್ಚು ಹೊತ್ತು ಹೆಲ್ಮೆಟ್‌ ಧರಿಸೋದರಿಂದ ತಲೆಗೆ ಸರಿಯಾಗಿ ಆಕ್ಸೀಜನ್‌ ಸಪ್ಲೈ ಆಗೋದಿಲ್ಲ. ಇದರಿಂದಾಗಿ ಕೂದಲು ಉದುರಲು ಆರಂಭವಾಗುತ್ತದೆ. ಕೂದಲಿನ ಆಕ್ಸೀಜನ್‌ ಬ್ಲಡ್‌ ಸ್ಟ್ರೀಮ್‌ ಮೂಲಕ ದೊರೆಯುತ್ತದೆ.


ಕೂದಲು ಉದುರುವುದು ಕೇವಲ ಹೆಲ್ಮೆಟ್‌ ಧರಿಸಿದರೆ ಮಾತ್ರವಲ್ಲ ನೀವು ಕೂದಲನ್ನು ಟೈಟ್‌ ಆಗಿ ಕಟ್ಟಿದರೆ, ಪೂರ್ತಿಯಾಗಿ ಮುಚ್ಚಿದರೂ ಸಹ ಕೂದಲು ಉದುರುತ್ತದೆ.

ಕೂದಲು ಉದುರದೆ ಇರಲು ಈ ರೀತಿ ಮಾಡಿ :
ತಲೆಬುರುಡೆಯನ್ನು ಸ್ವಚ್ಛವಾಗಿಡಿ. ಬೈಕ್‌ ಚಲಾಯಿಸುವಾಗ ಮಧ್ಯೆ ಮಧ್ಯೆ ಬ್ರೇಕ್‌ ತೆಗೆದುಕೊಂಡು ಹೆಲ್ಮೆಟ್‌ ತೆಗೆದು ತಲೆಯ ಬೆವರನ್ನು ಒಣ ಬಟ್ಟೆಯಿಂದ ಒರೆಸಿಕೊಳ್ಳಿ.  ಇದರಿಂದ ಕೂದಲು ಒದ್ದೆ ಇರುವುದಿಲ್ಲ.

ಹೆಲ್ಮೆಟ್‌ ಧರಿಸುವ ಮೊದಲು ಸ್ಕಾರ್ಫ್ ಅಥವಾ ಟವೆಲ್‌ನ್ನು ತಲೆಗೆ ಕಟ್ಟಿಕೊಳ್ಳಿ, ನಂತರ ಹೆಲ್ಮೆಟ್‌ ಹಾಕಿಕೊಳ್ಳಿ.  ಹೆಲ್ಮೆಟ್‌ ತೆಗೆಯುವಾಗ ಕೂದಲಿಗೆ ಸಿಕ್ಕಿಕೊಳ್ಳದಂತೆ ನಿಧಾನವಾಗಿ ತೆಗೆಯಿರಿ. ಹೆಲ್ಮೆಟ್‌ನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿ.

ಹೆಲ್ಮೆಟ್‌ ಧರಿಸುವುರಿಂದ ಕೂದಲಿನ ಮೇಲೆ ಉಂಟಾಗುವ ಹಾನಿಯನ್ನು ತಡೆಯಬೇಕಾದರೆ ತಲೆಯನ್ನು ಸಾಂಕ್ರಾಮಿಕಗಳಿಂದ ದೂರವಿಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ