ಮನೆಯಲ್ಲಿ ಸೊಳ್ಳೆಕಾಟ ಹೆಚ್ಚಾಗಿದೆಯೇ? ಹಾಗಾದ್ರೆ ಇದನ್ನು ಬಳಸಿ ಸೊಳ್ಳೆಗಳಿಂದ ಪಾರಾಗಿ

ಮಂಗಳವಾರ, 22 ಜನವರಿ 2019 (09:06 IST)
ಬೆಂಗಳೂರು : ಇತ್ತೀಚೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಹೆಚ್ಚಾಗಿ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ ಸಮಸ್ಯೆಯಿಂದ ಬಳಲುತ್ತಾರೆ. ಆದ್ದರಿಂದ ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ ಈ ಸೊಳ್ಳೆಗಳಿಂದ ನಿಮ್ಮ ಕುಟುಂಬವನ್ನ ಕಾಪಾಡಿಕೊಳ್ಳಿ.


ನಿಂಬೆಹಣ್ಣನ್ನು 2 ಭಾಗವಾಗಿ ಕಟ್ ಮಾಡಿಕೊಂಡು ಅದರ ಮೇಲೆ ಲವಂಗವನ್ನು ಚುಚ್ಚಿ. ಇದನ್ನು  ಮನೆಯಲ್ಲಿ ಹೆಚ್ಚು ಸೊಳ್ಳೆ ಇರುವ ಸ್ಥಳದಲ್ಲಿ ಇಡಿ. ಇದರಿಂದ ಸೊಳ್ಳೆ ಮನೆಯೊಳಗೆ ಬರುವುದಿಲ್ಲ.


ಒಂದು ಪ್ಲೇಟ್ ನಲ್ಲಿ 4-5 ಕರ್ಪೂರ ತೆಗೆದಕೊಂಡು ಅದಕ್ಕೆ  ಬೇವಿನ ಎಣ್ಣೆ ಹಚ್ಚಿ, ನಂತರ ಅದರ ಮೇಲೆ 4-5 ಹನಿ ಬೇವಿನ ಎಣ್ಣೆಹಾಕಿ ಮನೆಯ ಒಂದು ಮೂಲೆಯಲ್ಲಿಡಿ . ಇದರ ವಾಸನೆಗೆ  ಸೊಳ್ಳೆ ಮನೆಯಿಂದ ಓಡಿಹೋಗುತ್ತವೆ.


4-5 ಬೆಳ್ಳುಳ್ಳಿ ಎಸಳು ತೆಗೆದುಕೊಂಡು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದು ತಣ್ಣಗಾದ ಮೇಲೆ ಆ ನೀರನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ  ಮನೆಯಲೆಲ್ಲಾ ಸ್ಪ್ರೇ ಮಾಡಿ. ಇದರಿಂದ ಮನೆಯಲ್ಲಿ ಸೊಳ್ಳೆ ಕಾಟ ಇರಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ