ಬೂದು ಕೂದಲಿಗೆ.. ನೈಸರ್ಗಿಕ ಬಣ್ಣ ಪಡೆಯಲು ಹೀಗೆ ಮಾಡಿ

ಶನಿವಾರ, 13 ಆಗಸ್ಟ್ 2016 (10:46 IST)
ಹಲವರು ಬೂದು ಬಣ್ಣದ ಕೂದಲುಗಳಿಂದ ರೋಸಿ ಹೋಗಿರುತ್ತಾರೆ.. ಕಪ್ಪಾಗಿ ತಮ್ಮ ಕೂದಲು ಇರಬೇಕು ಎಂದು ಬಯಸುತ್ತಾರೆ. ಆದ್ರೆ ಬೂದು ಬಣ್ಣದ ಕೂದಲನ್ನು ನಿವಾರಿಸಲು ನಾವು ಏನೆಲ್ಲಾ ಪ್ರಯತ್ನ ಮಾಡುತ್ತೇವೆ.. ನೈಸರ್ಗಿಕ ಬಣ್ಣ ಪಡೆಯಲು ಮಾರ್ಕೆಟ್‌‌ನಲ್ಲಿ ಸೀಗುವ ಹಲವು ಉತ್ಪನ್ನಗಳನ್ನು ಕೊಂಡು ಕೊಳ್ಳುತ್ತೇವೆ. ಆದ್ರೆ ಮನೆಯಲ್ಲೇ ಈ ವಸ್ತುಗಳನ್ನು ಬಳಿಸಿ ಕೂದಲನ್ನು ನೈಸರ್ಗಿಕ ಬಣ್ಣವನ್ನಾಗಿ ಮಾಡಬಹುದು. ಚಿಕ್ಕ ಟಿಪ್ಸ್ ನಿಮಗಾಗಿ.
ಗ್ರೇ ಕೂದಲು ಸರಿಪಡಿಸಲು ಹೀಗೆ ಮಾಡಿ...
ಗ್ರೇ ಕೂದಲಿನಿಂದ ನ್ಯಾಚುರಲ್ ಕಲರ್ ಅನ್ನು ಹೊಂದಬಹುದು.. ಇದರಿಂದ ನಿಮ್ಮ ದೃಷ್ಟಿ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ. 
 
200 ಗ್ರಾಂ ಅಗಸೆ ಬೀಜದ ಎಣ್ಣೆ
4 ಮಧ್ಯಮ ಗಾತ್ರದ ನಿಂಬೆಹಣ್ಣು
3 ಕಡಿಮೆ ಬೆಳ್ಳುಳ್ಳಿ ಎಸಳು 
1 ಕೆ.ಜಿ ಜೇನುತುಪ್ಪ
 
ತಯಾರಿಸುವ ವಿಧಾನ
ಬೆಳ್ಳುಳ್ಳಿ ಹಾಗೂ ನಿಂಬೆ ಹಣ್ಣನ್ನು ಚೆನ್ನಾಗಿ ಹದವಾಗಿ ಮಿಶ್ರಣ ಮಾಡಿ.. ನಂತರ ಅಗಸೆ ಬೀಜದ ಎಣ್ಣೆ ಹಾಗೂ ಜೇನು ತುಪ್ಪ ಮಿಶ್ರಣ ಮಾಡುವುದನ್ನು ಮುಂದುವರೆಸಿ, ಅದಾದ ಬಳಿಕ ಮಿಕ್ಸ್ ಮಾಡಿರುವಂತಹದನ್ನು ಒಂದು ಗಾಜಿನ ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಮುಚ್ಚಳ ಮುಚ್ಚಿ ಫ್ರಿಡ್ಜ್‌ನಲ್ಲಿಡಿ..
 
ಆಮೇಲೆ ಊಟಕ್ಕಿಂತ 30 ನಿಮಿಷಗಳ ಮೊದಲು 1 ಟೀ ಸ್ಪೂನ್ ನಷ್ಟು ತೆಗೆದುಕೊಂಡು ಕುಡಿಯಿರಿ. ಇದರಿಂದ ಬರುಬರುತ್ತಾ   ನಿಮ್ಮ ಬೂದು ಬಣ್ಣದ ಕೂದಲಿನಲ್ಲಿ ಬದಲಾವಣೆ ಕಂಡು ಬರುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ