ಹಣ್ಣು, ತರಕಾರಿ ತಿಂದು ಒತ್ತಡವನ್ನು ದೂರ ಮಾಡುವುದು ಹೀಗೆ

ಸೋಮವಾರ, 13 ಫೆಬ್ರವರಿ 2017 (11:08 IST)
ಬೆಂಗಳೂರು: ನಮ್ಮ ದೈನಂದಿನ ದಿನದಲ್ಲಿ ಒತ್ತಡಗಳನ್ನು ನಿವಾರಿಸಲು ತುಂಬಾ ಸರಳ ಉಪಾಯವಿದೆ. ಇದಕ್ಕಾಗಿ ಯಾವುದೇ ಸರ್ಕಸ್ ಮಾಡಬೇಕಾಗಿಲ್ಲ. ಸಾಕಷ್ಟು ಹಣ್ಣು, ತರಕಾರಿ ತಿಂದರೆ ಸಾಕು. ಎರಡೇ ವಾರದಲ್ಲಿ ಒತ್ತಡ ಮಂಗಮಾಯ!

 
ಹೌದು. ಆಹಾರ ತಜ್ಞರ ಪ್ರಕಾರ ಪೋಷಕಾಂಶಯುಕ್ತ ತರಕಾರಿ, ಹಣ್ಣು ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯವನ್ನೂ ಕಾಪಾಡುತ್ತದೆ. ಸಮತೋಲಿತ ಆಹಾರ ಸೇವನೆ ಮಾಡುವುದು ನಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.

ಒಟಾಗೋ ವಿವಿಯ ತಜ್ಞರು ಸುಮಾರು 171 ಯುವ ಜನತೆಯ ಮೇಲೆ ಪ್ರಯೋಗ ನಡೆಸಿ ಎರಡು ವಾರಗಳಲ್ಲಿ ಒತ್ತಡ ಕಡಿಮೆ ಮಾಡುವ ಆಹಾರ ಕ್ರಮವನ್ನು ಕಂಡುಕೊಂಡಿದ್ದಾರೆ. ಪ್ರಯೋಗದಲ್ಲಿ ಪಾಲ್ಗೊಂಡ ಯುವ ಜನತೆಗೆ ಹೆಚ್ಚಾಗಿ ಕ್ಯಾರೆಟ್, ಸೇಬು, ಕಿತ್ತಳೆ ಹಣ್ಣನ್ನು ಅಧಿಕವಾಗಿ ನೀಡಲಾಗಿದೆಯಂತೆ.

ಸುಮ್ಮನೇ ದಿನಕ್ಕೆ ನಾಲ್ಕು ಹೊತ್ತು ಏನೋ ಒಂದು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದಲ್ಲ. ಆರೋಗ್ಯಕರ ಹಣ್ಣು, ತರಕಾರಿಗಳ ಸಮೇತ ಸಮತೋಲಿತ ಆಹಾರ ಸೇವಿಸಿ ಒತ್ತಡ ದೂರ ಮಾಡಬಹುದು ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ