ಹೃದಯ ಕಾಯಿಲೆಗಳಿಗೆ ನಿಮ್ಮ ಹಲ್ಲುಗಳೇ ಕಾರಣವಂತೆ.. ಅಧ್ಯಯನದಿಂದ ಬಹಿರಂಗ

ಗುರುವಾರ, 4 ಆಗಸ್ಟ್ 2016 (11:03 IST)
ಹಲ್ಲಿನ ಸೋಂಕು ಹಾಗೂ ಕಾಯಿಲೆಗಳಿಂದ ಬಹಳ ಜನರು ಬಳಲುತ್ತಾರೆ. ಹಲ್ಲಿನ ಸಮಸ್ಯೆ ಇದ್ರು ಜಾಸ್ತಿ ಅದರ ಕಡೆಗೆ ಗಮನ ಕೊಡುವುದಿಲ್ಲ. ಹಲ್ಲುಗಳು ಹೃದಯ ಕಾಯಿಲೆಗಳ ಮೇಲೆ ಪರಿಣಾಮ ಬೀರಬಲ್ಲವು. ಆದ್ದರಿಂದ ಹಲ್ಲಿನ ಸಮಸ್ಯೆ ಕಂದ್ರೆ ನಿರ್ಲಕ್ಷ ಮಾಡುವುದು ಬೇಡ ಎನ್ನುತ್ತಿದೆ ಸಂಶೋಧನೆ.

ಸಂಶೋಧನೆ ಪ್ರಕಾರ ಹಲ್ಲಿನ ಹಲವಾರು ಸಮಸ್ಯೆಗಳು ಹೃದಯ ಸಮಸ್ಯೆಗಳಿಗೆ ಎಡೆಮಾಡಬಲ್ಲದ್ದು. ಆದ್ದರಿಂದ ಹೃದಯದ ಕಾಯಿಲೆ ಬಾರದಂತೆ ಇರಲು ಹಲ್ಲುಗಳ ರಕ್ಷಣೆಯ ಕಡೆಗೆ ಕಾಳಜಿ ವಹಿಸಿ ಎಂದಿದೆ. 
 
ಹೊಸ ಅಧ್ಯಯನದಿಂದ ತಿಳಿದು ಬಂದ ಅಂಶವೆನೆಂದರೆ ಹಲ್ಲಿನ ಸಮಸ್ಯೆ ಇರೋ ರೋಗಿಗಳಿಗೆ ಚಿಕಿತ್ಸೆ ಸೀಗದೇ ಹೋದ್ರೆ, ಅಥವಾ ಮಾಡಿಕೊಳ್ಳದೇ ಹೋದ್ರೆ ಸಿಡ್ರೋಮಾ ಪ್ರಮಾಣ ಶೇ 2.7ರಷ್ಟು ಹೆಚ್ಚಾಗುತ್ತದೆ ಎಂದು ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕ ಹೆಲ್ಸಿಂಕಿ ಹೇಳಿದ್ದಾರೆ.
 
ಹಲ್ಲಿನ ಮೂಲ ತುದಿ ಸೋಂಕು ಎಪಿಕಲ್ ಪಿರಿಯಾಡೋಟಿಸ್ ಎಂದು ಕರೆಯಲಾಗುತ್ತದೆ. ಇದು ಹಲ್ಲಿನ ಮೇಲ್ಫಾಗದ ಎಲ್ಲಾ ಕಡೆಗಳಲ್ಲಿ  ತೀಕ್ಷ್ಣವಾಗಿ ಪರಿವರ್ತನೆಯಾಗುತ್ತದೆ. ಇದು ದಂತ ಕ್ಷಯಕ್ಕೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.
 
ಈ ಸಂಬಂಧ ಫಿನ್‌ಲ್ಯಾಂಡ್‌ನ ಅಧ್ಯಯನಕಾರರು 62 ವರ್ಷದ ಸುಮಾರು 508 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ತಿಳಿದು ಬಂದ ಅಂಶವೆನೆಂದರೆ ಎಲ್ಲಾ ರೋಗಿಗಳಿಗೆ ಹೃದಯ ಕಾಯಿಲೆ ಇರುವುದು ಪತ್ತೆಯಾಗಿದೆ.
 
ಹಲ್ಲುಗಳ ಸೋಂಕನ್ನು ತಡೆಗಟ್ಟಲು ಹಲ್ಲುಗಳ ರೂಟ್ ಕೆನಾಲ್ ಚಿಕಿತ್ಸೆ ತೆಗೆದುಕೊಂಡ್ರೆ ಹೃದಯದ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಅಲ್ಲದೇ ಬಾಯಿಯ ಸೋಂಕು ಇತರ ಭಾಗಗಳಲ್ಲಿ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಹಲ್ಲುಗಳನ್ನು ಹಾಗೂ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

ವೆಬ್ದುನಿಯಾವನ್ನು ಓದಿ