ಗಂಟಲಿನಲ್ಲಿ ಕಿಚ್ ಕಿಚ್? ಹೀಗೆ ಮಾಡಿ

ಬುಧವಾರ, 11 ಜನವರಿ 2017 (10:05 IST)
ಬೆಂಗಳೂರು: ಮೊದಲೇ ಚಳಿಗಾಲ. ಸ್ವಲ್ಪ ಕೋಲ್ಡ್ ನೀರು, ಗಾಳಿ ಸೋಕಿದರೂ ಶೀತ ಗ್ಯಾರಂಟಿ. ಗಂಟಲು ನೋವು ಜತೆಗೇ ಬರುತ್ತದೆ. ಗಂಟಲು ನೋವಿನ ಕಿರಿ ಕಿರಿಯಿಂದ ಉಗುಳು ನುಂಗಲೂ ಆಗದ ಉಗುಳಲೂ ಆಗದ ಪರಿಸ್ಥಿತಿ ಇದ್ದರೆ ಏನು ಮಾಡಬೇಕು ನೋಡಿಕೊಳ್ಳಿ.

ಮಲಗುವ ಮುನ್ನ ಹದ ಬಿಸಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಉತ್ತಮ. ಆಗಾಗ ಬಿಸಿ ನೀರಿಗೆ ಸ್ವಲ್ಪ ನಿಂಬೆ  ರಸ, ಉಪ್ಪು ಸೇರಿಸಿ ಕುಡಿಯುತ್ತಿರಿ. ಆದಷ್ಟು ಬೆಚ್ಚಗಿನ ಆಹಾರ ಸೇವಿಸುತ್ತಿರಿ.

ಇದಲ್ಲದೆ ಶುಂಠಿ, ಕಾಳುಮೆಣಸು, ತುಳಸಿ ಎಲೆ ಸೇರಿಸಿ ಕಷಾಯ ತಯಾರಿಸಿ ಕುಡಿಯಬಹುದು. ಅದಲ್ಲದೆ ಹಸಿ ಶುಂಠಿಗೆ ಸ್ವಲ್ಪ ಉಪ್ಪು ಸೇರಿಸಿ ತಿಂದರೆ, ಗಂಟಲು ಬಿಡುವುದು ಮಾತ್ರವಲ್ಲದೆ, ಕೆಮ್ಮಿದ್ದರೂ ಉಪಶಮನವಾಗುತ್ತದೆ. ಶುಂಠಿಯಲ್ಲಿ ಗಂಟಲು ನೋವಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸುವ ಶಕ್ತಿಯಿದೆಯಂತೆ.

ಹಸಿ ಬೆಳ್ಳುಳ್ಳಿ ಸೇವನೆಯೂ ಗಂಟಲು ಕೆರೆತಕ್ಕೆ ಉತ್ತಮ ಪರಿಹಾರ. ಗಂಟಲು ನೋವಿಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುವ ಲವಂಗ ಸೇವನೆಯೂ ಗಂಟಲು ನೋವಿಗೆ ಒಳ್ಳೆಯ ಪರಿಹಾರ ನೀಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ