ನಗು ನಗುತಾ ನಲಿ ಏನೇ ಆಗಲಿ.. ನಗುವಿನಲ್ಲಿದೆ ಆರೋಗ್ಯದ ಗುಟ್ಟು

ಬುಧವಾರ, 1 ಫೆಬ್ರವರಿ 2017 (09:04 IST)
ಬೆಂಗಳೂರು: ಏನಿಲ್ಲದಿದ್ದರೂ ಮುಖದಲ್ಲೊಂದು ನಗುವಿದ್ದರೆ ಜಗತ್ತನ್ನೇ ಗೆಲ್ಲಬಹುದಂತೆ. ಅಷ್ಟೊಂದು ಪವರ್ ಫುಲ್ ನಗು ಎಂದರೆ. ನಗು ನಗುತಾ ಇರುವುದರಿಂದ ನಮ್ಮ ದೇಹದ ಆರೋಗ್ಯ ಎಷ್ಟು ಹೆಚ್ಚುತ್ತದೆ ನೋಡೋಣ.

 
ಮುಖ್ಯವಾಗಿ ನಗುತ್ತಿದ್ದರೆ ಬಿಪಿ ಜಾಸ್ತಿಯಾಗಲ್ಲ ಅಂತ ಆಡುಮಾತಿನಲ್ಲಿ ಹೇಳುತ್ತಾರೆ. ಅಂದರೆ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ಸಹಜವಾಗಿ ರಕ್ತದೊತ್ತಡ ನಿಯಂತ್ರಣದಲ್ಲಿ ಹೃದಯದ ಆರೋಗ್ಯವೂ ಸುರಕ್ಷಿತವಾಗಿರುತ್ತದೆ.

ಇನ್ನೊಂದು ಲಾಭವೆಂದರೆ ಒತ್ತಡ, ಆತಂಕ ನಿಮ್ಮ ಹತ್ತಿರವೂ ಸುಳಿಯಲಾರದು. ಎಷ್ಟೋ ರೋಗಗಳು ಮಾನಸಿಕ ಒತ್ತಡದಿಂದಲೇ ಶುರುವಾಗುತ್ತದೆ. ತುಂಬಾ ದುಃಖದಲ್ಲಿದ್ದಾಗ ಅದನ್ನು ಮರೆಸಲು ನಗುವೇ ಸಿದ್ಧೌಷಧ ಎನ್ನುತ್ತಾರೆ. ನಗುವಿಗೆ ಎಂತಹ ನೋವನ್ನೂ ಮರೆಸುವ ಶಕ್ತಿಯಿದೆಯಂತೆ.

ಇನ್ನೊಂದು ಸ್ಪೆಷಾಲಿಟಿ ಗೊತ್ತಾ? ನಗುತ್ತಿದ್ದರೆ ನಮ್ಮ ಹೊಟ್ಟೆ, ಮುಖದ ಮಾಂಸಖಂಡಗಳಿಗೆ ಉತ್ತಮ ವ್ಯಾಯಾಮ ಒದಗಿಸಿದಂತಾಗುತ್ತದೆ. ಅಲ್ಲದೆ ನಗುವುದರಿಂದ ರೋಗ ನಿರೋಧಕ ಶಕ್ತಿಯ ಅಂಗಾಂಶಗಳ ಬೆಳವಣಿಗೆಯೂ ಆಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನಗು ಮುಖ ಹೊಂದಿದ್ದರೆ ಬಹಳ ಬೇಗ ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಸ್ನೇಹ ಜೀವಿಗಳಾಗುತ್ತೀರಿ. ಅಲ್ಲದೆ ಯಾರೂ ನಿಮ್ಮನ್ನು ತಪ್ಪು ತಿಳಿಯುವ ಪ್ರಮೇಯ ಇರುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ