ಎಸೆನ್ಷಿಯಲ್ ಆಯಿಲ್ ಗಳ ಉಪಯೋಗಗಳನ್ನು ತಿಳಿಯಿರಿ

ಭಾನುವಾರ, 20 ಡಿಸೆಂಬರ್ 2020 (06:46 IST)
ಬೆಂಗಳೂರು : ಎಸೆನ್ಷಿಯಲ್ ಆಯಿಲ್ ಶುದ್ಧವಾದ ಆಯಿಲ್ ಆಗಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಬಳಸುವಾಗ ತೆಂಗಿನೆಣ್ಣೆ ಮಿಕ್ಸ್ ಮಾಡಿ ಬಳಸಬೇಕು. ಇದರಲ್ಲಿ ಹಲವು ಬಗೆಯ ಆಯಿಲ್ ಗಳಿವೆ. ಇವುಗಳನ್ನು ಬಳಸಿದರೆ ಯಾವ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ. 

*ನೀಲಗಿರಿ : ಇದನ್ನು ಬಳಸುವುದರಿಂದ ಸ್ನಾಯು ಸೆಳೆತ, ಮತ್ತು ನೋವುಗಳನ್ನು ನಿವಾರಿಸುತ್ತದೆ.

*ಲ್ಯಾವೆಂಡರ್ : ಇದು ಡ್ರೈ ಚರ್ಮದ ಆರೈಕೆಗೆ ಉತ್ತಮ. ಚರ್ಮದ ಉರಿಯನ್ನು ಶಮನಗೊಳಿಸುತ್ತದೆ. ಇದನ್ನು ಬಳಸಿದರೆ ಚೆನ್ನಾಗಿ ನಿದ್ರೆಗೆ ಬರುತ್ತದೆ.

*ಜೆರೇನಿಯಂ : ಆತಂಕವನ್ನು ನಿವಾರಿಸುತ್ತದೆ ಮತ್ತು ಹಿತವಾದ ಪರಿಣಾಮಗಳನ್ನು ಉಂಟುಮಾಡುತ್ತವೆ.

*ದಾಲ್ಚಿನ್ನಿ : ಒತ್ತಡವನ್ನು ಸರಾಗಗೊಳಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹಾಗೂ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

*ನಿಂಬೆ : ಚರ್ಮವನ್ನು ಕ್ಲೀನ್ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಯನ್ನು ನಿವಾರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ