ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪು ಬಳಸಿ!

ಭಾನುವಾರ, 12 ನವೆಂಬರ್ 2017 (08:10 IST)
ಬೆಂಗಳೂರು: ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬೇಕು. ನೀವೇ ಓದಿ.

 
ಕೊತ್ತಂಬರಿ ಸೊಪ್ಪು, ಅಲ್ಯುವೀರಾ ರಸ
ಕೊತ್ತಂಬರಿ ಸೊಪ್ಪನ್ನು ಅಲ್ಯುವೀರಾ ಜತೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

ನಿಂಬೆ ಹಣ್ಣಿನ ಜತೆ
ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಕೊಂಚ ನಿಂಬೆ ರಸ ಸೇರಿಸಿಕೊಂಡು ಕಪ್ಪು ವರ್ತುಲಗಳಿರುವ ಕಡೆ ಹಚ್ಚಿಕೊಂಡರೆ ಚರ್ಮ ಕಾಂತಿಯುತವಾಗುತ್ತದೆ.

ಫೇಸ್ ಪ್ಯಾಕ್
ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಕೊಂಚ ಜೇನು ತುಪ್ಪ, ಹಾಲು ಮತ್ತು ನಿಂಬೆ ರಸ ಸೇರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದು ಚರ್ಮಕ್ಕೆ ಹೊಳಪು ನೀಡುತ್ತದೆ.

ಅಕ್ಕಿ ಮತ್ತು ಮಜ್ಜಿಗೆ ಜತೆ
ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಅಕ್ಕಿ ಹಿಟ್ಟು ಮತ್ತು ಮಜ್ಜಿಗೆ ಸೇರಿಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಮುಖದ ಅಂಗಾಂಗಳು ರಿಫ್ರೆಶ್ ಆಗಿ ನಿಮಗೆ ಉಲ್ಲಾಸ ನೀಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ