ದಾಳಿಂಬೆ ಬೀಜದಿಂದ ತಯಾರಿಸಿ ಆರೋಗ್ಯಕರ ಗೊಜ್ಜು

ಶನಿವಾರ, 4 ಜುಲೈ 2020 (09:30 IST)
ಬೆಂಗಳೂರು : ದಾಳಿಂಬೆ ಆರೋಗ್ಯಕ್ಕೆ ತುಂಬಾ ಉತ್ತಮಕಾರಿ. ಈ ದಾಳಿಂಬೆಯ ಬೀಜದಿಂದ ರುಚಿಕರವಾದ ಗೊಜ್ಜು ತಯಾರಿಸಬಹುದು. ಅದನ್ನು ಅನ್ನದ ಜೊತೆ ಸವಿಯಲು ಹಿತಕರವಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು: ದಾಳಿಂಬೆ ಬೀಜ 1 ಕಪ್,, ಹಸಿ ಮೆಣಸಿನ ಕಾಯಿ 1-2, ಟೊಮೆಟೊ 1, ಒಣ ಮೆಣಸಿನ ಕಾಯಿ 1, ಸಾಸಿವೆ ½ ಚಮಚ, ಜೀರಿಗೆ ½ ಚಮಚ, ಕರಿಬೇವು 7-8 ಎಲೆ, ಇಂಗು ¼ ಚಮಚ, ಹುಣಸೆ ರಸ 2 ಚಮಚ, ಅರಿಶಿಣ ¼ ಚಮಚ, ಬೆಲ್ಲ 1-2 ಚಮಚ, ಎಣ್ನೆ 1 ಚಮಚ, ಉಪ್ಪು.

ಮಾಡುವ ವಿದಾನ : ಟೊಮೆಟೊವನ್ನು ನೀರಿನಲ್ಲಿ ಕುದಿಸಿ, ಬಳಿಕ ಮಿಕ್ಸಿ ಜಾರ್ ಗೆ ಬೆಂದ ಟೊಮೆಟೊ, ಹಸಿ ಮೆಣಸಿನ ಕಾಯಿ ದಾಳಿಂಬೆ ಬೀಜ ಹಾಕಿ ತರಿತರಿಯಾಗಿ ರುಬ್ಬಿ ಅದಕ್ಕೆ ಉಪ್ಪು, ಬೆಲ್ಲ ಮಿಕ್ಸ್ ಮಾಡಿ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ, ಇಂಗು, ಅರಿಶಿಣ ಹಾಕಿ ಒಗ್ಗರಣೆ ಹಾಕಿ. ಬಳಿಕ ರುಬ್ಬಿದ ಮಿಶ್ರಣ ಹಾಕಿ ಹುಣಸೆರಸ  ಹಾಕಿ ಕುದಿಸಿದರೆ ದಾಳಿಂಬೆ ಗೊಜ್ಜು ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ