ಅಕ್ಕಿಯಿಂದ ಫೇಸ್ ಕ್ರೀಂ ತಯಾರಿಸುವುದು ಹೇಗೆ ಗೊತ್ತಾ?

ಶನಿವಾರ, 4 ಜುಲೈ 2020 (09:06 IST)
ಬೆಂಗಳೂರು : ಅಕ್ಕಿ ಮುಖದ ಬಣ್ಣ ಬಿಳಿಯಾಗಲು ಬಹಳ ಉಪಯೋಗಕಾರಿ. ಆದಕಾರಣ ಅಕ್ಕಿಯಿಂದ ಕ್ರೀಂ ತಯಾರಿಸಿ ಮುಖಕ್ಕೆ ಬಳಸಿ.

ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆ ನೆನೆಹಾಕಿ. ಬಳಿಕ ಆ ಅಕ್ಕಿಯನ್ನು ಹಾಲಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಸೋಸಿ. ಇದನ್ನು ಸಣ್ಣ ಉರಿಯಲ್ಲಿ ಕ್ರೀಂ ಹದಕ್ಕೆ ಬರುವ ತನಕ ಬಿಸಿ ಮಾಡಿ . ಬಳಿಕ ಅದರಲ್ಲಿ 2 ಚಮಚ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ 2 ವಿಟಮಿನ್ ಇ ಕ್ಯಾಪ್ಸುಲ್, 1 ಚಮಚ ಬಾದಾಮಿ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಪ್ರತಿದಿನ ಮುಖಕ್ಕೆ ಹಚ್ಚಿದರೆ ಮುಖದ ಬಣ್ಣ ಬಿಳಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ