ಪುರುಷರ ಒಳಉಡುಪಿನಿಂದ ವೀರ್ಯಾಣುವಿನ ಆರೋಗ್ಯ ನಿರ್ಧಾರ!

ಮಂಗಳವಾರ, 14 ಆಗಸ್ಟ್ 2018 (09:26 IST)
ಬೆಂಗಳೂರು: ಆರೋಗ್ಯವಂತ ವೀರ್ಯಾಣು ಇದ್ದರೇನೇ ಪುರುಷರಿಗೆ ಸಂತಾನೋತ್ಪತ್ತಿ ಸುಗಮವಾಗುತ್ತದೆ. ಆದರೆ ಪುರುಷರು ಧರಿಸುವ ಒಳಉಡುಪಿನಿಂದ ಅವರ ವೀರ್ಯಾಣುವಿನ ಆರೋಗ್ಯವೂ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು.
 

ಅಧ್ಯಯನವೊಂದರ ಪ್ರಕಾರ ಬಿಗಿಯಾದ ಒಳ ಉಡುಪು ಧರಿಸುವ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆಯಂತೆ. ಅದೇ ಸಡಿಲವಾದ ಒಳಉಡುಪು ಧರಿಸುವ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಅಧಿಕವಾಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಸುಮಾರು 600 ಕ್ಕೂ ಹೆಚ್ಚು ಪುರುಷರ ಮೇಲೆ ಅಧ್ಯಯನ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಹೀಗಾಗಿ ಪುರುಷರು ಒಳ ಉಡುಪು ವಿಚಾರದಲ್ಲಿ ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ, ತಮ್ಮ ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಸರಿಯಾದ ಆಯ್ಕೆ ಮಾಡುವ ಅಗತ್ಯವಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ