ಮಲಬದ್ಧತೆಯನ್ನು ನಿವಾರಿಸಲು ಹಾಲಿಗೆ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ

ಮಂಗಳವಾರ, 20 ಏಪ್ರಿಲ್ 2021 (06:39 IST)
ಬೆಂಗಳೂರು : ನಾವು ಸೇವಿಸುವ ಕೆಟ್ಟ ಆಹಾರಗಳು ನಮ್ಮ ಆರೋಗ್ಯದ ಮೇಲೆ ಹಾನಿಮಾಡುತ್ತವೆ. ಇವು ಮಲಬದ್ಧತೆ, ಅಜೀರ್ಣ ಸಮಸ್ಯೆಯನ್ನುಂಟುಮಾಡುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಸೇವಿಸಿ.

ಮಲಬದ್ಧತೆಯನ್ನು ನಿವಾರಿಸಲು ಹರಳೆಣ್ಣೆ ಬಹಳ ಸಹಕಾರಿಯಾಗಿದೆ. ಇದು ಸಂಶೋಧನೆಯ ಮೂಲಕ ಸಾಬೀತಾಗಿದೆ. ಹಾಗಾಗಿ ಹಾಲಿಗೆ ಹರಳೆಣ್ಣೆ ‍ಮಿಕ್ಸ್ ಮಾಡಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆಯಂತೆ.

ರಾತ್ರಿ ಮಲಗುವ ಮುನ್ನ ಊಟವಾದ ಬಳಿಕ ತಣ‍್ಣಗಾದ ಹಾಲಿನಲ್ಲಿ 2 ಚಮಚ ಹರಳೆಣ್ಣೆ ಮಿಕ್ಸ್ ಮಾಡಿ ಕುಡಿಯಿರಿ. ಇದು  ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ