ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ
ಗುರುವಾರ, 23 ಜುಲೈ 2020 (08:59 IST)
ಬೆಂಗಳೂರು : ಗುಲಾಬಿ ಗಿಡ ಹೂ ಬಿಡಲು ನಾವು ಕೆಮಿಕಲ್ ಯುಕ್ತ ಪದಾರ್ಥಗಳನ್ನು ಹಾಕುತ್ತೇವೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ನೀರನ್ನು ಹಾಕಿ.
2 ಲೀಟರ್ ನೀರನ್ನು ಬಿಸಿ ಮಾಡಿ ಅದಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕಿ, 2 ಚಮಚ ಕಾಫಿ ಪುಡಿ, 2 ಚಮಚ ಮೊಸರು ಹಾಕಿ ಚೆನ್ನಾಗಿ ಕುದಿಸಿ. ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ಅದನ್ನು ಸೋಸಿ ಅದನ್ನು ನೀರಿಗೆ ಮಿಕ್ಸ್ ಮಾಡಿ ಗುಲಾಬಿ ಗಿಡಕ್ಕೆ ಹಾಕಿ. ಇದರಲ್ಲೊ ಪೊಟ್ಯಾಶಿಯಂ ಅಧಿಕ ಪ್ರಮಾಣದಲ್ಲಿರುವುದರಿಂದ ಗುಲಾಬಿ ಗಿಡ ಚೆನ್ನಾಗ ಹೂ ಬಿಡುತ್ತದೆ.