ಬೇಗನೇ ಮಗು ಪಡೆಯುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್!

ಬುಧವಾರ, 5 ಜುಲೈ 2017 (09:09 IST)
ಬೆಂಗಳೂರು: ಮದುವೆಯಾಗಿ ವರ್ಷ ಕಳೆಯುತ್ತಾ ಬಂದರೆ ಹೆಣ್ಣಿಗೆ ಎದುರಾಗುವ ಒಂದೇ ಪ್ರಶ್ನೆ, ‘ಇನ್ನೂ ಏನೂ ವಿಶೇಷ ಇಲ್ವಾ?’ ಆದರೆ ಮಕ್ಕಳಾಗಲು ಏನೇನು ಸರ್ಕಸ್ ಮಾಡಿದರೂ ಆಗದೇ ಇದ್ದರೆ ಏನು ಮಾಡೋದು? ಹಾಗೆಂದು ಚಿಂತೆ ಮಾಡುವವರಿಗೊಂದಿಷ್ಟು ಸಲಹೆ ಇಲ್ಲಿದೆ ನೋಡಿ.


ಗರ್ಭ ನಿರೋಧಕ ಮಾತ್ರೆ ನಿಲ್ಲಿಸಿ
ಫ್ಯಾಮಿಲಿ ಪ್ಲಾನಿಂಗ್ ಎಂದು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಮಕ್ಕಳನ್ನು ಮಾಡಿಕೊಳ್ಳಲು ಯೋಜನೆ ಹಾಕಿಕೊಂಡ 7-8 ತಿಂಗಳ ಮೊದಲೇ ನಿಲ್ಲಿಸಿ. ಯಾಕೆಂದರೆ ನಿಮ್ಮ ದೇಹ ಸಾಮಾನ್ಯ ಅಂಡಾಣು ಪ್ರಕ್ರಿಯೆಗೆ ಒಗ್ಗಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

ಅಂಡಾಣು ಬಿಡುಗಡೆ ಸಮಯ
ಪ್ರತಿಯೊಬ್ಬರಿಗೂ ಋತುಚಕ್ರ ವ್ಯತ್ಯಸ್ಥವಾಗಿರುತ್ತದೆ. ಋತುಚಕ್ರದ ಅವಧಿಗೆ ತಕ್ಕಂತೆ ಅಂಡಾಣು ಬಿಡುಗಡೆ ದಿನವೂ ವ್ಯತ್ಯಾಸವಾಗಿರುತ್ತದೆ. ಸಾಮಾನ್ಯವಾಗಿ ಋತು ಚಕ್ರದ ಅವಧಿ 28 ದಿನಗಳಾಗಿರುತ್ತದೆ. ಹಾಗಿರುವಾಗ  14 ನೇ ದಿನ ಫಲಪ್ರದವಾಗಿರುತ್ತದೆ.

ಧೂಮಪಾನ ನಿಲ್ಲಿಸಿ
ಮಕ್ಕಳನ್ನು ಹಡೆಯುವ ವಿಚಾರದಲ್ಲಿ ಮಹಿಳೆಯರಷ್ಟೇ ಪುರುಷರಿಗೂ ಸಮಾನ ಜವಾಬ್ದಾರಿಗಳಿರುತ್ತದೆ. ಪತ್ನಿಯ ಎದುರೇ ಧೂಮಪಾನ ಮಾಡುವುದರಿಂದ ಆಕೆಗೂ ತೊಂದರೆ ನಿಮಗೂ ತೊಂದರೆ. ಆರೋಗ್ಯಕರ ವೀರ್ಯಾಣು ಪಡೆಯಲು ಧೂಮಪಾನ, ತಂಬಾಕು ಸೇವನೆಯಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಿ.

ಆಹಾರ
ಅತಿಯಾಗಿ ಉಷ್ಣ ಸಂಬಂಧೀ ಆಹಾರ ಸೇವನೆ ಒಳ್ಳೆಯದಲ್ಲ. ಪಪ್ಪಾಯ, ಪೈನಾಪಲ್, ಜಂಕ್ ಫುಡ್, ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನು ಸಾಧ್ಯವಾದಷ್ಟು ದೂರಮಾಡಿ. ಉತ್ತಮ ಹಣ್ಣು ಹಂಪಲುಗಳು ಸೇವನೆ ಮಾಡಿ.

ಒಂದು ವೇಳೆ ನಿಮ್ಮ ವಯಸ್ಸು 35 ದಾಟಿದ್ದರೆ ನಂತರ ವೈದ್ಯರ ಸಲಹೆ ಪಡೆಯಲೇಬೇಕು. ವಯಸ್ಸಾದಂತೆ ಫಲವಂತಿಕೆ ಕಡಿಮೆಯಾಗುತ್ತಾ ಸಾಗುವುದರಿಂದ ಮಕ್ಕಳನ್ನು ಪಡೆಯುವುದು ಕಷ್ಟವಾಗಬಹುದು. ಆಗ ತಜ್ಞರು ನಿಮ್ಮ ಸಹಾಯಕ್ಕೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ