ಬೆಂಗಳೂರು: ಗರ್ಭಿಣಿ ಮಹಿಳೆಗೆ ಲೈಂಗಿಕಾಸಕ್ತಿ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಇದಕ್ಕೆ ಕಾರಣವೇನು? ತಜ್ಞರು ಹೇಳಿದ್ದಾರೆ ನೋಡಿ.
ಗರ್ಭಿಣಿಯರಿಗೆ ವಾಕರಿಕೆ, ತಲೆ ಸುತ್ತು, ವಿಪರೀತ ನಿದ್ರೆ ಅಥವಾ ಸುಸ್ತು ಇಂತಹ ಅನೇಕ ಲಕ್ಷಣಗಳು ಇರುತ್ತವೆ. ಈ ಸಂದರ್ಭದಲ್ಲಿ ಆಕೆ ಲೈಂಗಿಕಾಸಕ್ತಿ ತೋರದೇ ಇರಬಹುದು.ಇನ್ನು ಕೆಲವರು ಹುಟ್ಟುವ ಮಗುವಿಗೆ ತೊಂದರೆಯಾಗಬಹುದೆಂಬ ಕಲ್ಪನೆಯಿಂದ ಸೆಕ್ಸ್ ನಿಂದ ದೂರವುಳಿಯುತ್ತಾರೆ.
ಮೊದಲ ಮೂರು ತಿಂಗಳ ನಂತರ ಲೈಂಗಿಕ ಜೀವನ ನಡೆಸಲು ತೊಂದರೆಯಿಲ್ಲದಿದ್ದರೂ ಮಹಿಳೆಯ ಅನುಕೂಲ, ಮನಸ್ಥಿತಿ ಲೈಂಗಿಕ ಜೀವನಕ್ಕೆ ಸಮ್ಮತಿ ಹೊಂದಿಲ್ಲದಿದ್ದರೆ ಸಂಗಾತಿ ಆಕೆಯ ಮನಸ್ಥಿತಿಯನ್ನು ಗೌರವಿಸುವುದು ಒಳಿತು ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ