ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಚೆನ್ನಾಗಿ ತಿನ್ನಬೇಕು ಎಂದು ಹಾಲು ತುಪ್ಪ, ಮೊಸರು ಹೇರಳವಾಗಿ ಕೊಡುತ್ತಾರೆ. ತುಪ್ಪ ನಿಜವಾಗಿಯೂ ಗರ್ಭಿಣಿಯರಿಗೆ ಅಗತ್ಯವೇ?
ತುಪ್ಪ ತಿಂದರೆ ಹೆರಿಗೆ ನೋವು ಕಡಿಮೆಯಾಗುತ್ತದೆ, ದೇಹ ಗಟ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ, ಹೆರಿಗೆಯ ಸಂದರ್ಭದಲ್ಲಿ ಯೋನಿಯ ದ್ವಾರ ತೆರೆದುಕೊಳ್ಳಲು ತುಪ್ಪ ತಿಂದರೆ ಒಳ್ಳೆಯದು ಎಂಬ ನಂಬಿಕೆ.
ಆದರೆ ಇದಕ್ಕೆಲ್ಲಾ ವೈಜ್ಞಾನಿಕ ತಳಹದಿಯಿಲ್ಲ. ಸಂಶೋಧಕರ ಪ್ರಕಾರ ಗರ್ಭಿಣಿ ಮಹಿಳೆಗೆ ತನ್ನ ಮಗುವನ್ನು ಪೊರೆಯಲು 200 ಹೆಚ್ಚುವರಿ ಕ್ಯಾಲೋರಿ ಅಗತ್ಯವಿದೆ. ಅದನ್ನು ಬೇರೆ ಆಹಾರಗಳಿಂದಲೂ ಪಡೆಯಬಹುದು. ತುಪ್ಪ ತಿಂದರೆ ಕೊಬ್ಬು ಹೆಚ್ಚುವುದಲ್ಲದೆ, ಇತರ ಆರೋಗ್ಯಕರ ಆಹಾರಗಳಿಂದ ಸಿಗುವಷ್ಟು ಪೌಷ್ಠಿಕಾಂಶ ಸಿಗದು ಎಂದು ಸಂಶೋಧಕರು ಹೇಳುತ್ತಾರೆ. ಹಾಗಾಗಿ ತುಪ್ಪ ಅನಿವಾರ್ಯವಲ್ಲ ಎಂಬುದು ಅವರ ವಾದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ