ಚಮತ್ಕಾರಿ ಮನೆಮದ್ದು! ಆಹಾರಕ್ಕೂ ಸೈ, ಆರೋಗ್ಯಕ್ಕೂ ಸೈ

ಮಂಗಳವಾರ, 16 ನವೆಂಬರ್ 2021 (10:28 IST)
ಗಸಗಸೆ ಪ್ರತಿಯೊಂದು ಮನೆಯಲ್ಲೂ ಇರುತ್ತವೆ. ಇದೊಂದು ಮಸಾಲ ಪದಾರ್ಥವಾದರೂ ಉತ್ತಮ ರೀತಿಯ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ.
ಇದು ಆಹಾರಕ್ಕೆ ರುಚಿ ಹೆಚ್ಚಿಸುವುದಲ್ಲದೆ, ನಮ್ಮ ದೇಹದ ಆರೋಗ್ಯಕ್ಕೂ ಸೈ ಎನ್ನುವಂತೆ ಪರಿಣಾಮಕಾರಿಯಾಗಿದೆ.
ಅಡುಗೆಮನೆಯಲ್ಲಿರುವ ಗಸಗಸೆ ಎಲ್ಲರಿಗೂ ಚಿರಪರಿಚಿತ. ಆದರೆ, ಗಸಗಸೆ ಅಡಿಗೆಗೆ ಮಾತ್ರವಲ್ಲದೇ, ಹೃದಯ ರೋಗ, ಜೀರ್ಣಕ್ರಿಯೆ, ಕೂದಲು ಮತ್ತು ಚರ್ಮದ ಸಮಸ್ಯೆಗಳು, ನಿದ್ರಾಹೀನತೆ, ಮಧುಮೇಹ, ಮೂಳೆಗಳ ಅಸಹಜತೆ ಮತ್ತು ನರ ಸಮಸ್ಯೆಗಳಂತಹ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಪೌಷ್ಟಿಕಾಂಶದ ಮೌಲ್ಯಗಳು
100 ಗ್ರಾಂ ಇಡೀ ಗಸಗಸೆ ಬೀಜಗಳಲ್ಲಿ ಈ ಕೆಳಗೆ ನೀಡಿರುವ ಪೌಷ್ಟಿಕಾಂಶಗಳು ಒಳಗೊಂಡಿರುತ್ತವೆ:
ಪೋಷಕಾಂಶ ಮೊತ್ತ
ಎನರ್ಜಿ - 536 ಕ್ಯಾಲೋರಿಗಳು
ಪ್ರೋಟೀನ್ -21.43 ಗ್ರಾಂ
ಲಿಪಿಡ್ (ಕೊಬ್ಬು) - 39.29 ಗ್ರಾಂ
ಕಾರ್ಬೋಹೈಡ್ರೇಟ್ - 28.57 ಗ್ರಾಂ
ಫೈಬರ್ - 25 ಗ್ರಾಂ
ಸಕ್ಕರೆ - 3.57 ಗ್ರಾಂ
ಕ್ಯಾಲ್ಸಿಯಂ - 1,250 ಮಿಲಿಗ್ರಾಂ
ಕಬ್ಬಿಣ - 9.64 ಮಿಗ್ರಾಂ
ಮೆಗ್ನೀಸಿಯಮ್ - 357 ಮಿಗ್ರಾಂ
ಸತು - 8.04 ಮಿಗ್ರಾಂ
ಬಂಜೆತನ ನಿವಾರಣೆ
ಗಸಗಸೆ ಮತ್ತು ಅದರ ಎಣ್ಣೆ ಮಹಿಳೆಯರಲ್ಲಿ ಬಂಜೆತನ ನಿವಾರಣೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಕಟ್ಟಿದ ಫೆಲೋಪಿಯನ್ ನಾಳಗಳು ಫಲವತ್ತಾದ ಅಂಡ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಗಸಗಸೆ ಬೀಜದಿಂದ ಫೆಲೋಪಿಯನ್ ನಾಳ ಫ್ಲಶ್ ಮಾಡುವುದರಿಂದ, ಯಾವುದೇ ಕಸ ಅಥವಾ ಶ್ಲೇಷ್ಮ ಕಣಗಳು ಕರಗಿ, ಅಡಚಣೆ ನಿವಾರಣೆಯಾಗುತ್ತದೆ, ಈ ಮೂಲಕ ಇದು ಫಲವತ್ತತೆಯ ಸಾಧ್ಯತೆ ಹೆಚ್ಚಿಸುತ್ತದೆ. ಗಸಗಸೆಯಲ್ಲಿ ಲಿನಿನ್ ಎನ್ನುವ ಅಂಶ ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ.
ಜೀರ್ಣಕ್ರಿಯೆ
ನಾರಿನಿಂದ ಸಮೃದ್ಧವಾಗಿರುವ ಗಸಗಸೆ ಜೀರ್ಣಕ್ರಿಯೆ ಉತ್ತೇಜಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇದು ಆಹಾರದಿಂದ ಪೋಷಕಾಂಶಗಳ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ಗುಣಪಡಿಸುವುದರೊಂದಿಗೆ ಗುದದ್ವಾರದ ಮೂಲಕ ತ್ಯಾಜ್ಯ ಪದಾರ್ಥಗಳು ಸುಲಭವಾಗಿ ಹೋಗಲು ನೆರವಾಗುತ್ತದೆ.
ಹೃದಯ
ಗಸಗಸೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಓಲಿಕ್ ಆಮ್ಲ ರಕ್ತದೊತ್ತಡ ಕಡಿಮೆ ಮಾಡಿದರೆ, ಒಮೆಗಾ-6 ಫ್ಯಾಟಿ ಆಮ್ಲ ಹೃದಯಕ್ಕೆ ಹೆಚ್ಚು ಪ್ರಯೋಜನವಾಗುವಂತೆ ಮಾಡಿದೆ. ಇದು ಹೃದಯಾಘಾತ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯ
ಗಸಗಸೆ ಸಮೃದ್ಧವಾದ ಆಂಟಿಆಕ್ಸಿಡೆಂಟ್ ಹೊಂದಿದ್ದು, ಚರ್ಮದ ಉರಿಯೂತ, ನೆತ್ತಿಯ ಸೋಂಕುಗಳ ಸಾಧ್ಯತೆ ಕಡಿಮೆ ಮಾಡುವುದರೊಂದಿಗೆ, ಚರ್ಮ ಮತ್ತು ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಗಸಗಸೆಯಲ್ಲಿರುವ ಅಧಿಕ ಪ್ರಮಾಣದ ಲಿನೋಲಿಕ್ ಆಮ್ಲ ಕಜ್ಜಿ, ಸುಟ್ಟಗಾಯ ಮತ್ತು ಕೆರೆತಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಗಸಗಸೆಯ ಪೇಸ್ಟ್ ಅನ್ನು ಮುಖದ ಮೇಲೆ ಮಾಸ್ಕ್ ನಂತೆ ಹಾಕುವುದರಿಂದ ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಿಸಿ, ಸ್ವಚ್ಛವಾದ, ಹೊಳೆಯುವ ಚರ್ಮ ನೀಡುವ ಮೂಲಕ, ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ