ಅಸ್ತಮಾಕ್ಕೆ ರಾಮಬಾಣ ಬ್ಲ್ಯಾಕ್ ಕಾಫಿ!

ಮಂಗಳವಾರ, 9 ನವೆಂಬರ್ 2021 (13:20 IST)
ಅತಿಯಾದ ಕೆಮ್ಮು ಅಥವಾ ಅಸ್ತಮಾ ಸಮಸ್ಯೆಗೆ ತುರ್ತು ಮನೆ ಮದ್ದು ಯಾವುದಾದರೂ ಇದೆ ಎಂದರೆ ಅದು ಬ್ಲ್ಯಾಕ್ ಕಾಫಿ ಎಂದು ಹೇಳಬಹುದು.
ಏಕೆಂದರೆ ಎಮರ್ಜೆನ್ಸಿ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಣೆ ಮಾಡುವ ಗುಣಲಕ್ಷಣ ಇದರಲ್ಲಿದೆ.
ವಾರ್ಷಿಕವಾಗಿ ಹಲವಾರು ಸಾವು-ನೋವುಗಳು ಅಸ್ತಮಾ ಸಮಸ್ಯೆಯಿಂದ ಸಂಭವಿಸುತ್ತಿವೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದ ಒಂದು ಮಾಹಿತಿಯ ವರದಿಯಲ್ಲಿ ಕಂಡುಬಂದಿದೆ. ಹೀಗಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ರೋಗ ಲಕ್ಷಣಗಳು

•ಅಸ್ತಮಾ ಸಮಸ್ಯೆ ಯಾವಾಗ ತೀವ್ರಗತಿಯಲ್ಲಿ ಕಂಡುಬರುತ್ತದೆ ಎಂದರೆ, ಉಸಿರಾಡುವ ಉಸಿರಾಟ ನಾಳ ಊದಿಕೊಂಡು ಅಥವಾ ಉರಿಯೂತದಿಂದ ಬಳಲಿದ ಸಂದರ್ಭದಲ್ಲಿ.
•ಎದೆಯ ಭಾಗದ ಮಾಂಸಖಂಡಗಳು ಈ ಸಮಯದಲ್ಲಿ ಬಿಗಿತವನ್ನು ನೀಡುತ್ತವೆ. ವೇಗವಾದ ಉಸಿರಾಟ ನಡೆಸುವುದು, ಕೆಮ್ಮುವುದು, ದಮ್ಮು ಮಾತನಾಡಲು ಕಷ್ಟವಾಗುವುದು ಎಲ್ಲವೂ ಇದರ ರೋಗ ಲಕ್ಷಣಗಳು.
•ಒಂದು ವೇಳೆ ನಿಮ್ಮ ಮನೆಯಲ್ಲಿ ಆಸ್ತಮಾ ರೋಗಿಗಳು ಯಾರಾದರೂ ಇದ್ದರೆ, ಅವರಿಗೆ ಒಂದು ವೇಳೆ ಉಸಿರಾಡಲು ಕಷ್ಟವಾಗುವ ಸಂದರ್ಭ ಎದುರಾದರೆ, ಅವರನ್ನು ಮೊದಲು ನೇರವಾಗಿ ಒಂದು ಕಡೆ ಕೂರಿಸಿ, ಅವರು ಹಾಕಿಕೊಂಡಿರುವ ಶರ್ಟ್ ಅಥವಾ ಬಟ್ಟೆಯನ್ನು ಸಡಿಲ ಪಡಿಸಿ ಇನ್ಹೇಲರ್ ಬಳಕೆ ಮಾಡಲು ನೀಡಬೇಕು.
•ಅಸ್ತಮಾ ಸಮಸ್ಯೆಗೆ ರೋಗಲಕ್ಷಣಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷ ಮಾಡಬಾರದು. ಏಕೆಂದರೆ ಕ್ರಮೇಣವಾಗಿ ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಾ ಹೋದಂತೆ ದಮ್ಮು ಕೂಡ ಹೆಚ್ಚಾಗುತ್ತ ಹೋಗುತ್ತದೆ. ಇದರಿಂದ ಅಸ್ತಮಾ ರೋಗಿಯು ಜ್ಞಾನವನ್ನು ಕಳೆದುಕೊಂಡು ಕೊನೆಗೆ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ಉಸಿರಾಟ ಸಮಸ್ಯೆಗೆ ಬೆಸ್ಟ್!

ಉಸಿರಾಟ ಸಮಸ್ಯೆಯನ್ನು ಹೆಚ್ಚು ಮಾಡುವ ಅಸ್ತಮ ತೊಂದರೆಗೆ ಪರಿಹಾರವಾಗಿ ಬ್ಲಾಕ್ ಕಾಫಿ ಉಪಯೋಗಿಸಬಹುದು. ಇದು ಸ್ವಲ್ಪ ಕುಡಿಯಲು ಕಹಿ ಎನಿಸಿದರೂ ಕೂಡ ಅಸ್ತಮಾ ಸಮಸ್ಯೆಗೆ ಹಾಗೂ ಉಸಿರಾಟ ತೊಂದರೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ನಾಲಿಗೆಯಲ್ಲಿನ ರುಚಿ ಬುಗ್ಗೆಗಳಿಗೆ ತಾಜಾತನವನ್ನು ನೀಡಿ ಉಸಿರಾಟ ವ್ಯವಸ್ಥೆಯನ್ನು ಸರಿಪಡಿಸುತ್ತದೆ.
ಬ್ಲ್ಯಾಕ್ ಕಾಫಿ ಅಸ್ತಮಾ ಸಮಸ್ಯೆಗೆ ಬೆಸ್ಟ್!

•ಸಾವಿರಾರು ವರ್ಷಗಳ ಹಿಂದಿನಿಂದ ಆಯುರ್ವೇದ ಚಿಕಿತ್ಸೆ ಕೂಡ ಈ ಒಂದು ಪ್ರಯತ್ನವನ್ನು ಹಿಂದೆ ಮಾಡಿದ್ದು, ಯಶಸ್ವಿಯಾಗಿ ಪರಿಹಾರವನ್ನು ಕಂಡುಕೊಂಡಿದೆ ಎಂದು ಬೇರೆ ದೇಶದ ಸಂಶೋಧನೆಯೊಂದು ತಿಳಿಸಿದೆ.
•ಹೀಗಾಗಿ ಕಹಿ ಅನುಭವ ಇರುವ ಬ್ಲಾಕ್ ಕಾಫಿ ಅಸ್ತಮಾ ಸಮಸ್ಯೆಗೆ ತಕ್ಷಣವೇ ಕೆಲಸ ಮಾಡಬಲ್ಲದು. ನಾಲಿಗೆಯ ರುಚಿಯನ್ನು ಹೆಚ್ಚಿಸಿ ಮೆದುಳಿಗೆ ಸಂಕೇತಗಳನ್ನು ನೀಡಿ ಶ್ವಾಸಕೋಶದ ಭಾಗದಲ್ಲಿ ಕಂಡುಬರುವ ಉರಿಯೂತವನ್ನು ಕಡಿಮೆ ಮಾಡುವ ಕೆಲಸವನ್ನು ಇದು ಮಾಡುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ