ವ್ಯಾಯಾಮದ ದೇಹದಂಡನೆಯಿಂದ ಹೃದಯಾಘಾತವಾಗುತ್ತದೆಯೇ?

ಮಂಗಳವಾರ, 9 ನವೆಂಬರ್ 2021 (12:34 IST)
ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ದೇಹಕ್ಕೆ ಸಹಾಯ ಮಾಡುತ್ತದೆ.
ಯೋಗ, ವ್ಯಾಯಾಮ, ವರ್ಕೌಟ್ ಮಾಡುವುದರಿಂದ ದೇಹದ ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇಷ್ಟೇಲ್ಲಾ ಪ್ರಯೋಜವಿರುವ ದೇಹದಂಡನೆಯಿಂದ ಹೃದಯಕ್ಕೆ ತೊಂದರೆಯೇ? ಎಂದು ನಿಮಗೆ ಅನುಮಾನವಿರಬಹುದು. ಕೆಲವು ಅಧ್ಯಯನದ ಪ್ರಕಾರ ಕಠಿಣವಾದ ವರ್ಕೌಟ್ ಮಾಡುವುದರಿಂದ, ಬೇಗ ಸಣ್ಣಗಾಗಬೇಕು ಎಂಬ ಬಯಕೆಯಿಂದ, ಹಲವಾರು ಪ್ರೋಟೀನ್ ಗಳ, ಇಂಜೆಂಕ್ಷನ್ ಗಳ ಬಳಕೆಯಿಂದ ದೇಹಕ್ಕೆ ತೊಡುಕುಗಳು ಉಂಟಾಗುತ್ತದೆ.
ತ್ವರಿತವಾಗಿ ಸಣ್ಣಗಾಗಿ ನಾಜೂಕಾದ ದೇಹ ಹೊಂದಬೇಕು ಎಂದಾಗಲೀ, ತಕ್ಷಣವೇ ಸಿಕ್ಸ್ ಪ್ಯಾಕ್ ಬಂದು ಬಿಡಬೇಕು ಎಂದಾಗಲೀ ದೇಹ ದಂಡನೆ ಮಾಡಬಾರದು. ಸಮತೋಲಿತ ಆಹಾರವನ್ನು ಸೇವಿಸಿ. ದೇಹದ ಮೇಲಿನ ಅತಿಯಾದ ಬಯಕೆ ಬಿಟ್ಟುಬಿಡಿ. ದೇಹದ ಆರೋಗ್ಯದ ಮೇಲೆ ಕಾಳಜಿ ವಹಿಸಿ.
ದೇಹದಂಡನೆ ಹೃದಯವನ್ನು ಕಾಪಾಡುತ್ತದೆ

ವ್ಯಾಯಾಮವು ಮುಖ್ಯವಾಗಿ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುವುದರಿಂದ ಹಿಡಿದು ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ದೇಹದಂಡನೆ ಮಾಡುವುದು ಆರೋಗ್ಯವಾದ ದೇಹ ಹಾಗು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ದಿನನಿತ್ಯದ ಜೀವನದಲ್ಲಿ ದೇಹಕ್ಕೆ ಆಹಾರ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ದೇಹ ದಂಡನೆ ಕೂಡ. ಆದರೆ ಎಷ್ಟು ಮಾಡಬೇಕು? ಹೇಗೆ ಮಾಡಬೇಕು? ಯಾವ ಆಹಾರವನ್ನು ಸೇವಿಸಬೇಕು? ಎಂಬುವ ಅರಿವು ಇರುವುದು ಅತಿ ಮುಖ್ಯವಾದುದು.
ಹೃದಯಕ್ಕೆ ವ್ಯಾಯಾಮ
ಮುಖ್ಯವಾಗಿ, ಹೃದಯಕ್ಕೆ ವ್ಯಾಯಾಮದ ಅಗತ್ಯತೆ ಹೆಚ್ಚಾಗಿದೆ. ದೇಹದಂಡನೆ ಮಾಡುವಾಗ ಸಹಜವಾಗಿಯೇ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗೆಯೇ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾದರೆ ಹೃದಯಾಘಾತಕ್ಕೆ ಕಾರಣವಾಗುವ ವ್ಯಾಯಾಮಗಳು ಯಾವುವು? ಎಂಬುದರ ಮಾಹಿತಿ ಇಲ್ಲಿದೆ.
ಪ್ರತಿದಿನ ಸುಮಾರು ೧೫೦ ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಉತ್ತಮ ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹೃದಯದ ಸ್ನಾಯುಗಳನ್ನು ಬಲಪಡಿಸಲು ಮತ್ತು ಹೃದಯದ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ.
ಆದರೆ ಅತಿಯಾದ ಪರಿಶ್ರಮದ ದೇಹದಂಡನೆಯಿಂದ ಹೃದಯದ ಸಮಸ್ಯೆಯಾಗುವ ಸಾಧ್ಯತೆಗಳಿವೆ ಎಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆ. ತೀವ್ರತರವಾದ ವ್ಯಾಯಾಮವು ಹೃದಯದ ಮೇಲೆ ಪರಿಣಾಮ ಬೀರಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ವ್ಯಾಯಾಮದ ಪ್ರಯೋಜನಗಳ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯಕರವಾದ ದೇಹವನ್ನು ಮತ್ತು ಉತ್ತಮವಾದ ಆರೋಗ್ಯವನ್ನು ಪಡೆಯಲು ದೇಹದಂಡನೆ ಮಾಡಲೇಬೇಕು. ಆದರೆ ಎಷ್ಟು ಮಾಡಬೇಕು ? ಏನು ಮಾಡಬೇಕು? ಎಂಬುದರ ಮೇಲೆ ನಿಗಾ ಇಡಬೇಕು.
ಬೇಕಾಬಿಟ್ಟಿಯಾಗಿ ನಿಮ್ಮ ದೈಹಿಕ ಶಕ್ತಿಗೆ ನೀವೇ ಸವಾಲು ಎಸೆಯಬೇಡಿ. ಇದರಿಂದ ಹಠಾತ್ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬಹುದು. ಪ್ರತಿದಿನವು ೩೦ ನಿಮಿಷಗಳ ಕಾಲ ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸಿ.
ಮನೆಯಲ್ಲಿ ಹಲವಾರು ವ್ಯಾಯಾಮಕ್ಕೆ ಸಂಬಂಧಿಸಿದ ಮಿಷಿನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ಖರೀದಿಸಿ, ಸೂಕ್ತವಾದ ಸಲಹೆಯನ್ನು ಪಡೆದು ಮನೆಯಲ್ಲಿಯೇ ದೇಹದಂಡನೆ ಮಾಡಿ. ಯಾವುದೇ ಕಾರಣಕ್ಕೂ ತಕ್ಷಣ ಸಣ್ಣಗೆ ಮಾಡುವಂತಹ ಉತ್ಪನ್ನಗಳಿಂದ ದೂರವಿರಿ. ದೇಹದಲ್ಲಿ ಯಾವುದೇ ತೊಡಕು ಸಂಭವಿಸಿದರೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ