ಇಲಿ ಜ್ವರಕ್ಕೆ ಕಾರಣಗಳು ಮತ್ತು ತಡೆಗಟ್ಟಲು ಏನು ಮಾಡಬೇಕು

Krishnaveni K

ಮಂಗಳವಾರ, 9 ಜುಲೈ 2024 (11:44 IST)
ಬೆಂಗಳೂರು: ಡೆಂಗ್ಯೂ ಜ್ವರದ ಜೊತೆಗೆ ರಾಜ್ಯದಲ್ಲಿ ಈಗ ಇಲಿ ಜ್ವರದ ಭೀತಿಯೂ ಶುರುವಾಗಿದೆ. ಈಗಾಗಲೇ ಕೆಲವು ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಇಲಿ ಜ್ವರಕ್ಕೆ ಕಾರಣಗಳು ಮತ್ತು ತಡೆಗಟ್ಟಲು ಏನು ಮಾಡಬೇಕು ಎಂದು ನೋಡೋಣ.

ಇಲಿ ಜ್ವರ ಹರಡುವುದು ಮುಖ್ಯವಾಗಿ ಇಲಿಯ ಯಾವುದೇ ಭಾಗದ ದ್ರವದಿಂದಾಗಿ. ಇಲಿಯ ಕಣ್ಣು ಬಾಯಿ ಅಥವಾ ಮೂತ್ರ ನಿಮ್ಮ ದೇಹಕ್ಕೆ ಸೋಕಿದಾಗ ಅದರಿಂದ ಸೋಂಕು ತಗುಲಬಹುದು. ಅಥವಾ ನೀವು ಸೇವಿಸುವ ನೀರಿಗೆ ಈ ದ್ರವ ಸೇರಿಕೊಂಡಾಗ ಇಲಿ ಜ್ವರ ಬರಬಹುದು. ಅಲ್ಲದೆ ಇಲಿ ಸೇವಿಸುವ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಸಂಪರ್ಕವೂ ಮಾರಕವಾಗಬಹುದು.

ಹೀಗಾಗಿ ಸಾಕು ಪ್ರಾಣಿಗಳೊಂದಿಗೂ ಎಚ್ಚರಿಕೆಯಿಂದಿರಿ. ಸಾಕು ಪ್ರಾಣಿಗಳನ್ನು ಮುಟ್ಟಿದ ಬಳಿಕ ಸೋಪು ಅಥವಾ ಸಾನಿಟೈಸ್ ಮಾಡಿ ಕೈ ಸ್ವಚ್ಛಗೊಳಿಸಿ. ಮನೆಯಲ್ಲಿ ನೀವು ತಿನ್ನುವ ಆಹಾರ ಮತ್ತು ನೀರು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯ ಸುತ್ತಮುತ್ತ ಇಲಿಗಳು ಬಂದು ಸೇರಿಕೊಳ್ಳಲು ಅವಕಾಶ ಮಾಡಿಕೊಡಬೇಡಿ.

ಆಹಾರ ಪದಾರ್ಥಗಳನ್ನು ತೆರೆದಿಡಬೇಡಿ. ತೆರೆದಿಟ್ಟ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೆ ಸೇವಿಸಬೇಡಿ. ಇಲಿಯ ಮೂತ್ರ, ಮಲ ಬಿದ್ದ ಜಾಗವನ್ನು ಸೋಂಕು ನಿರೋಧಕ ಬಳಸಿ ಸ್ವಚ್ಛಗೊಳಿಸಿ.ಇಲಿ ಕಚ್ಚಿದ ಗಾಯವಾದರೆ ಆ ಜಾಗವನ್ನು ಸೋಪು ಹಾಕಿ ಬಿಸಿ ನೀರಿನಿಂದ ತೊಳೆಯಿರಿ. ಯಾವುದೇ ಜ್ವರ ಲಕ್ಷಣಗಳು ಕಂಡುಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ