ಬೆಂಗಳೂರು: ಪ್ರೀತಿ, ದೈಹಿಕ ವಾಂಛೆ ಯಾರ ಮೇಲೆ ಮೂಡುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ರಕ್ತ ಸಂಬಂಧಿಗಳಲ್ಲೇ ಈ ರೀತಿ ಪ್ರೀತಿ ಹುಟ್ಟುವುದು, ದೈಹಿಕ ಸಂಬಂಧ ಬೆಳೆಸುವುದು ಸರಿಯೇ ಎಂಬ ಜಿಜ್ಞಾಸೆ ನಮ್ಮಲ್ಲಿ ಮೂಡುತ್ತದೆ.
ನಿಜವಾಗಿ ಹೇಳುವುದಾದರೆ ರಕ್ತ ಸಂಬಂಧದಲ್ಲಿ ದೈಹಿಕ ಸಂಬಂಧ ಏರ್ಪಡಿಸುವುದು ಸಾಮಾಜಿಕವಾಗಿ ಅಷ್ಟು ಒಳ್ಳೆಯದಲ್ಲ. ನಮಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸ ಇದುವೇ.
ನಮ್ಮಲ್ಲಿ ಚಿಕ್ಕಪ್ಪ, ದೊಡ್ಡಪ್ಪ ಈ ರೀತಿ ರಕ್ತ ಸಂಬಂಧಿಗಳ ನಡುವಿನ ಸಂಬಂಧಕ್ಕೆ ಸಹೋದರತ್ವದ ಪವಿತ್ರ ಭಾವನೆಯಿದೆ. ಅದನ್ನು ಮುರಿದು ಈ ರೀತಿ ಲೈಂಗಿಕ ಸಂಬಂಧವಿಟ್ಟುಕೊಳ್ಳುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ ಎನ್ನಬಹುದು.