ಉಗುರಿನಲ್ಲಿ ಕಂಡುಬರುವ ಬಿಳಿ ಕಲೆಗಳಿಗೆ ಇಲ್ಲಿದೆ ನೋಡಿ ಪರಿಹಾರ

ಗುರುವಾರ, 5 ಜುಲೈ 2018 (06:51 IST)
ಬೆಂಗಳೂರು : ಅದೆಷ್ಟೋ ಜನರು ಉಗುರಿನಲ್ಲಿ ಬಿಳಿ ಕಲೆಗಳಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಲ್ಯುಕೋನಿಚಿಯಾ ಕಾರಣದಿಂದಲೂ ಕೂಡ ಆಗಿರಬಹುದು. ಇದು ಹೆಚ್ಚಾಗಿ ಕೈ ಹಾಗೂ ಕಾಲಿನ ಉಗುರುಗಳಲ್ಲಿ ಕಂಡುಬರುತ್ತದೆ. ನೈಸರ್ಗಿಕವಾಗಿ ಮನೆಯಲ್ಲಿ ಹೇಗೆ ಸುಲಭವಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ.


ನಿಂಬೆರಸ ಹಾಗೂ ಆಲಿವ್ ಆಯಿಲ್ : ನಿಂಬೆಯ ರಸದಲ್ಲಿರುವ ವಿಟಮಿನ್ ಸಿ ಅಂಶವು ಉಗುರಿನಲ್ಲಾದ ಬಣ್ಣದ ಬದಲಾವಣೆ ಮತ್ತು ಬಿಳಿ ಚುಕ್ಕಿಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಹಾಗೇ ಆಲಿವ್ ಎಣ್ಣೆಯು ಉಗುರನ್ನು ಪೋಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.


2 ಟೇಬಲ್ ಸ್ಪೂನ್ ನಿಂಬೆ ರಸ, ಕೆಲವು ಹನಿ ಆಲಿವ್ ಆಯಿಲ್ ಸೇರಿಸಿ ಮತ್ತು ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ನಿಮ್ಮ ಉಗುರಿಗೆ ಹಚ್ಚಿಕೊಂಡು 25 ರಿಂದ 30 ನಿಮಿಷ ಹಾಗೆಯೇ ಬಿಡಿ.ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ ಇದನ್ನು ನೀವು ಪ್ರತಿದಿನವೂ ಪದೇ ಪದೇ ಪುನರಾವರ್ತಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ