ಕೂದಲು ಸೊಂಪಾಗಿ ಬೆಳೆಯಲು ಬೀಜಗಳ ಬಳಕೆ

ಮಂಗಳವಾರ, 9 ಆಗಸ್ಟ್ 2016 (14:27 IST)
ಆರೋಗ್ಯವಂತ ಕೂದಲೂ ಪಡೆಯಲು ನೈಸರ್ಗಿಕವಾಗವಾಗಿರುವ ವಸ್ತುಗಳ ಕಡೆಗೆ ಗಮನ ಕೊಡಬೇಕು. ಕೂದಲು ಸೊಂಪಾಗಿ ಬೆಳೆಯಲು ಎಣ್ಣೆಯಲ್ಲಿ ಯಾವ ಬೀಜಗಳನ್ನು ಹಾಕಿ ಹಚ್ಚಿಕೊಂಡರೆ ನಿಮ್ಮ ತಲೆ ಕೂದಲು ಶೀಘ್ರದಲ್ಲಿ ಬೆಳವಣಿಗೆಯಾಗುತ್ತದೆ. ನಾಲ್ಕು ವಾರದಲ್ಲೇ ನಿಮ್ಮ ಕೂದಲಿನಲ್ಲಿ ಬದಲಾವಣೆ ಕಂಡು ಬರುತ್ತದೆ. ಎಣ್ಣೆಯಲ್ಲಿ ಯಾವ್ಯಾವ ಬೀಜಗಳನ್ನು ಮಿಕ್ಸ್ ಮಾಡಿ ಹಂಚಿಕೊಳ್ಳಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ. 
ವಿವಿಧ ಪ್ರಕಾರದ ಬೀಜಗಳಲ್ಲಿ ಪ್ರೋಟೀನ್ಸ ನಿಕೋಟಿನ್ ಅಂಶಗಳು ಇರುತ್ತವೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ಜೀವಸತ್ವಗಳು ಹಾಗೂ ಪ್ರೋಟೀನ್ ಅಂಶಗಳು ಬೆಳವಣಿಗೆಗೆ ಅವಶ್ಯಕತೆ ಇರುತ್ತದೆ.
 
ತೆಂಗಿನ ಎಣ್ಣೆ ಕೂದಲಿನ ಮೃದುತ್ವ ಹಾಗೂ ನೈಸರ್ಗಿಕ ಪೋಷಕಾಂಶಗಳನ್ನು ಕಾಣಬಹುದು. ಅಲ್ಲದೇ ಕೂದಲಿನ ಕಾಂತಿಯನ್ನು ಹೆಚ್ಚಿಸುತ್ತದೆ. 

100 ಮಿ,ಲೀ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಒಂದು ಚಮಚಾ ಮೆಂತ್ಯಾ, ಒಂದು ಸ್ಪೂನ್ ಈರುಳ್ಳಿ ಬೀಜ ಹಾಗೂ ಒಂದು ಗ್ಲಾಸ್‌ನ್ನು ತೆಗೆದಿಟ್ಟುಕೊಳ್ಳಿ. 
 
ನಂತರ ಪ್ರತ್ಯೇಕವಾಗಿ ಮೊದಲು ಮೆಂತ್ಯಾ ಬೀಜಗಳನ್ನು ಮಿಕ್ಸಿಯಲ್ಲಿ ಹಾಗಿ ಸ್ವಲ್ಪ ದಪ್ಪವಾಗಿ ಪೌಡರ್ ತಯಾರಿಸಿ, ಅದಾದ ಬಳಿಕ ಈರುಳ್ಳಿ ಬೀಜಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ದಪ್ಪವಾಗಿ ಮಾಡಿಟ್ಟುಕೊಳ್ಳಬೇಕು. ಒಂದು ಬಾಟಲ್ ತೆಗೆದುಕೊಂಡು ಎರಡು ಮಿಕ್ಸರ್‌ನಲ್ಲಿ ಮಾಡಿಕೊಂಡಿರುವುದನ್ನು ಪ್ರತ್ಯೇಕವಾಗಿ ತುಂಬಿ, ಆ ಬಳಿಕ ಇದರಲ್ಲಿ ಎಣ್ಣೆ ಮಿಕ್ಸ್ ಮಾಡಿ
 
ಆಮೇಲೆ ಪ್ಯಾನ್‌ನಲ್ಲಿ ನೀರು ತೆಗೆದುಕೊಂಡು ಬಿಸಿ ಮಾಡಿದ ಬಳಿಕ ಪ್ರತ್ಯೇಕವಾಗಿ ಬೀಜಗಳಿಂದ ತಯಾರಿಸಿದ ಮಿಕ್ಸ್ ಅನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಇಡಬೇಕು. ಆಮೇಲೆ15 ದಿನಗಳ ಬಳಿಕ ಸ್ನಾನದಲ್ಲಿ ಈ ಎಣ್ಣೆಯನ್ನು ಬಳಕೆ ಮಾಡಬಹುದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ