ಡೆಲಿವರಿ ನಂತರ ಸೆಕ್ಸ್: ಮಹಿಳೆಯರು ಏಕೆ ಒಲ್ಲೆನೆಂತಾರೆ ಗೊತ್ತಾ?

ಮಂಗಳವಾರ, 1 ಆಗಸ್ಟ್ 2017 (05:53 IST)
ಬೆಂಗಳೂರು: ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರದ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ಗೊಂದಲವಿಟ್ಟುಕೊಂಡಿರುತ್ತಾರೆ.

 
ಸಾಮಾನ್ಯವಾಗಿ ಹೆರಿಗೆಯ ನಂತರ ಮಹಿಳೆಯರಿಗೆ ಲೈಂಗಿಕಾಸಕ್ತಿ ಮೊದಲಿನಷ್ಟು ಇರುವುದಿಲ್ಲ ಎನ್ನುತ್ತಾರೆ. ಅದಕ್ಕೇ ಎಷ್ಟೋ ಜನ ದಂಪತಿ ಈ ವಿಷಯಕ್ಕೆ ಪರಸ್ಪರ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಉದಾಹರಣೆ ಕೇಳಿದ್ದೇವೆ.

ಅದಕ್ಕಾಗಿ ತಜ್ಞರು ಒಂದು ಐಡಿಯಾ ಕೊಟ್ಟಿದ್ದಾರೆ. ಡೆಲಿವರಿಯಾದ ಸಂದರ್ಭದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಸಿಗುವುದೇ ಅಪರೂಪಕ್ಕೆ. ಹೆಚ್ಚಾಗಿ ಮಕ್ಕಳು ಬೆಳಗಿನ ಅವಧಿಯಲ್ಲಿ ಮಲಗಿರುತ್ತಾರೆ. ಈ ಸಂದರ್ಭದಲ್ಲಿ ಲೈಂಗಿಕ ಸಂಬಂಧ ಏರ್ಪಡಿಸಬಹುದು. ಅದೂ ಮಹಿಳೆಯರ ದೇಹ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಆದಷ್ಟು ಅವರಿಗೆ ಕಿರಿ ಕಿರಿ ಉಂಟುಮಾಡುವಂತಹ ಕೆಲಸಕ್ಕೆ ಕೈ ಹಾಕಬೇಡಿ ಮತ್ತು ನೋವಾಗುವಂತೆ ನಡೆದುಕೊಳ್ಳಬೇಡಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಪ್ರಧಾನಿ ಸ್ವಾತಂತ್ರ್ಯ ದಿನಕ್ಕೆ ಏನು ಭಾಷಣ ಮಾಡಬೇಕು? ನೀವೇ ಐಡಿಯಾ ಕೊಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ