ಕೆಂಪು ತುಟಿಗಳಿಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್

ಗುರುವಾರ, 18 ಆಗಸ್ಟ್ 2016 (10:56 IST)
ಪಿಂಕ್ ಲಿಪ್ಸ್ ಎಲ್ಲರಿಗೂ ಇಷ್ಟವಾಗುತ್ತದೆ. ಕಪ್ಪು ತುಟಿ ಹೊಂದಿರುವವರು ಆತ್ಮಿವಿಶ್ವಾದದಿಂದ ಮಾತನಾಡಲು ಸಾಧ್ಯವಾಗುವುದಿಲ್ಲ, ಮಹಿಳೆಯರ ಸೌಂದರ್ಯವನ್ನು ಮರೆಮಾಚುವಲ್ಲಿ ತುಟಿಗಳು ಕಾರಣವಾಗಬಲ್ಲದ್ದು, ಸಾಫ್ಟ್ ತುಟಿಗಳಿಗಾಗಿ ಎಲ್ಲರೂ ಬಯಸುತ್ತಾರೆ. ನೀವು ಸಿಂಪಲ್ ಆಗಿಯೇ ಮನೆಯಲ್ಲೇ ಕೆಂಪು ಬಣ್ಣದ ತುಟಿಗಳನ್ನು ಪಡೆದುಕೊಳ್ಳಬಹುದು. ಇಲ್ಲಿದೆ ಟಿಪ್ಸ್ 
ಕೆಮಿಕಲ್ಸ್ ಹಾಗೂ ಕಾಸ್ಮೆಟಿಕ್ಸ್ ಲಿಪ್ ಸ್ಟಿಕ್  ಬಳಸಿ ಕೆಲವರು ತಮ್ಮ ತುಟಿಗಳಿಗೆ ಅಪಾಯ ತಂದು ಕೊಳ್ಳುತ್ತಾರೆ. ಆದ್ರೆ ಇದಕ್ಕಾಗಿ ನೀವೂ ಯೋಚನೆ ಮಾಡಬೇಕಾಗಿಲ್ಲ. 
 
ಒಂದು ನಿಂಬೆಹಣ್ಣು ತೆಗೆದುಕೊಂಡು, ಒಂದು ಕಪ್‌ನಲ್ಲಿ ಜ್ಯೂಸ್ ಮಾಡಿಟ್ಟುಕೊಳ್ಳಿ, ಅದಾದ ಬಳಿಕ ಹರಳು ಸಕ್ಕರೆ ತೆಗೆದುಕೊಂಡು ನಿಂಬೆ ರಸ ಸಿಂಪಡಿಸಿ, ಸಕ್ಕರೆ ಕರಗುವ ವರೆಗೂ ಬಿಟ್ಟುಬಿಡಿ. ಈ ಮಿಶ್ರಣವನ್ನು ತೆಗೆದುಕೊಂಡು ನಿಧಾನವಾಗಿ ತುಟಿಗಳಿಗೆ ಹಚ್ಚಿಕೊಳ್ಳಿ, ಪ್ರತಿ ದಿನ ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ಹಚ್ಚಿಕೊಂಡರೆ ಇದರ ಫಲಿತಾಂಶ ನಿಮಗೆ ಗೊತ್ತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ