ಪಪ್ಪಾಯ ಸೇವಿಸುವುದರಿಂದ ಈ ಅಪಾಯವೂ ಇದೆ!

ಭಾನುವಾರ, 22 ಜುಲೈ 2018 (09:39 IST)
ಬೆಂಗಳೂರು: ಪಪ್ಪಾಯ ಆರೋಗ್ಯಕ್ಕೆ ಒಳ್ಳೆಯದೇನೋ ಹೌದು. ಅದೇ ರೀತಿ ಇದರಿಂದ ದುಷ್ಪರಿಣಾಮವೂ ಇದೆ. ಅವು ಯಾವುವು ನೋಡೋಣ.

ಜೀರ್ಣಕ್ರಿಯೆಗೆ
ಪಪ್ಪಾಯ ಸೇವನೆ ಗರ್ಭಿಣಿಯರಿಗೆ ಗರ್ಭಪಾತಕ್ಕೆ ಕಾರಣವಾಗಬಹುದು. ಅದೇ ರೀತಿ ಜೀರ್ಣಕ್ರಿಯೆಗೂ ಕೆಲವರಿಗೆ ಸಮಸ್ಯೆಯಾಗಬಹುದು. ಚಿಕ್ಕ ಮಕ್ಕಳಿಗೆ ಇನ್ನೂ ಜೀರ್ಣ ಶಕ್ತಿ ಸಾಕಷ್ಟು ಬೆಳೆದಿರುವುದಿಲ್ಲ. ಆ ಸಂದರ್ಭದಲ್ಲಿ ಪಪ್ಪಾಯ ಸೇವನೆಯಿಂದ ಅಜೀರ್ಣ ಸಮಸ್ಯೆ ಕಾಡುವುದು ಇದೆ.

ಔಷಧಗಳನ್ನು ಸೇವಿಸುವಾಗ
ಕೆಲವು ರಕ್ತ ತೆಳುಗೊಳಿಸುವಂತಹ ಔಷಧಗಳನ್ನು ಸೇವಿಸುವಾಗ ಪಪ್ಪಾಯ ಸೇವಿಸುವುದು ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಪಪ್ಪಾಯ ಸೇವನೆಯಿಂದ ರಕ್ತಸ್ರಾವವಾಗುವ ಸಂಭವವೂ ಇದೆ.

ಲೋ ಬ್ಲಡ್ ಶುಗರ್
ಪಪ್ಪಾಯ ಬ್ಲಡ್ ಶುಗರ್ ಲೆವೆಲ್ ಕಡಿಮೆಗೊಳಿಸುವ ಗುಣಹೊಂದಿದೆ. ಹೀಗಾಗಿ ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಇತರ ಅಲರ್ಜಿಗಳು
ಕೆಲವರಿಗೆ ಪಪ್ಪಾಯ ಸೇವನೆಯಿಂದ ಚರ್ಮದ ತುರಿಕೆ, ಅಲರ್ಜಿಯಂತಹ ಸಮಸ್ಯೆಗಳೂ ಬರಬಹುದು. ಹಾಗಾಗಿ ಎಲ್ಲರಿಗೂ ಪಪ್ಪಾಯ ಆಗಿ ಬರಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ