ಆಯಿಲ್ ಸ್ಕಿನ್ ನಿವಾರಣೆಗೆ ಸರಳ ಮನೆಮದ್ದು

ಮಂಗಳವಾರ, 26 ಡಿಸೆಂಬರ್ 2017 (10:12 IST)
ಬೆಂಗಳೂರು: ಮುಖದ ಸ್ಕಿನ್ ಆಯಿಲ್ ಆಗಿದ್ದರೆ ಅದನ್ನು ಮುಟ್ಟಲು ನಮ್ಮ ಕೈ ಹಿಂದೇಟು ಹಾಕುತ್ತದೆ. ಇದರಿಂದ ಮುಖಕ್ಕೆ ಯಾವುದೆ ಮೇಕಪ್  ಹಾಕಿದರೂ ಅದು ಸ್ವಲ್ಪ ಸಮಯದಲ್ಲಿ ಹೋಗಿ ಮುಖದ ಅಂದವನ್ನು ಕೆಡಿಸುತ್ತದೆ. ಅದಕ್ಕಾಗಿ ಈ ಆಯಿಲ್ ಸ್ಕಿನ್ ನ್ನು ಮನೆಮದ್ದುಗಳಿಂದ ಕಡಿಮೆ ಮಾಡಬಹುದು.


ಮೊದಲು ಒಂದು ಬಾಳೆಹಣ್ಣು ತೆಗೆದುಕೊಂಡು ಅದನ್ನು ಮಸೆದು ಅದಕ್ಕೆ 5 ಚಮಚ ಜೇನುತುಪ್ಪ ಬೇರೆಸಿ ಪೇಸ್ಟ ಮಾಡಿ. ನಂತರ ಅದಕ್ಕೆ 10 ಚಮಚ ನಿಂಬೆ ಅಥವಾ ಕಿತ್ತಳೆ ರಸ ಬೇರೆಸಿ ನಂತರ ಈ ಪೇಸ್ಟನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಫೇಸ್ ಮಾಸ್ಕ್ ಮಾಡಬೇಕು. 20 ನಿಮಿಷಗಳ  ಬಳಿಕ ತೊಳೆಯಬೇಕು. ನಂತರ ಮುಖಕ್ಕೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಶಾಖ ಕೊಡಬೇಕು.


4 ಚಮಚ ಗ್ಲಿಸರಿನ್, 4 ಚಮಚ ರೋಸ್ ವಾಟರ್, 2 ಚಮಚ ನಿಂಬೆರಸ ಸೇರಿಸಿ ಪೇಸ್ಟ್  ತಯಾರಿಸಿ ಅದನ್ನು ಮುಖಕ್ಕೆ ಲೇಪಿಸಿ, 15 ನಿಮಿಷಗಳ ಬಳಿಕ ತೊಳೆಯಬೇಕು.ಇದರಿಂದ ಮುಖದಲ್ಲಿರುವ ಜಿಡ್ಡು ನಿವಾರಣೆಯಾಗುತ್ತದೆ. ಇವುಗಳನ್ನು ವಾರದಲ್ಲಿ ಮೂರು ಬಾರಿ  ಮಾಡಿದರೆ ಆಯಿಲ್ ಸ್ಕಿನ್ ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ