ನೀವೂ ರಾತ್ರಿ ಲೇಟಾಗಿ ಮಲಗುತ್ತೀರಾ..? ಹುಷಾರ್ ಮಕ್ಕಳಾಗುವ ಅವಕಾಶವನ್ನೆ ಕಳೆದುಕೊಳ್ಳಬಹುದು

ಭಾನುವಾರ, 14 ಮೇ 2017 (16:56 IST)
ಆರೋಗ್ಯಯುತ ವೀರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..?
ಲೈಫ್ ಸ್ಟೈಲ್ ಬದಲಾವಣೆ, ಆಹಾರ, ದುಶ್ಚಟಗಳು ಇವೇ ಮುಂತಾದ ಕಾರಣಕ್ಕೆ ಪುರುಷ ಬಂಜೆತನ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯಾಣು ಉತ್ಪಾದನೆ ಕುತ ಕಂಡು ಮಕ್ಕಳಿಲ್ಲದೆ ಪರಿತಪಿಸುವವರನ್ನ ಇಂತಹ ಸಮಸ್ಯೆಗಳಿಗೆ ಸಮಸ್ಯೆಗಳಿಗೆ ತುತ್ತಾದವರ ಬಳಿಯೇ ಪರಿಹಾರಗಳಿವೆ ಎನ್ನುತ್ತಿದೆ ಸಂಶೋಧನೆ.


ನೀವು ತಂದೆಯಾಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ರಾತ್ರಿ ಬೇಗ ಹಾಸಿಗೆಗೆ ತೆರಳಿ ನಿದ್ದೆ ಮಾಡಬೇಕು. ಬಹುಬೇಗ ನಿದ್ದೆಗೆ ಜಾರುವುದರಿಂದ ಆರೋಗ್ಯಯುತ ಮತ್ತು ಫಲವತ್ತತೆಗೆ ಸೂಕ್ತ ವೀರ್ಯಾಣು ಉತ್ಪಾದನೆ ಆಗುತ್ತದೆ ಎನ್ನುತ್ತಿದೆ ಸಂಶೋಧನೆ.

ಸಂಶೊಧನೆ ಪ್ರಕಾರ, ರಾತ್ರಿ 8ರಿಂದ 10ರ ಒಳಗೆ ನಿದ್ದೆಗೆ ಜಾರುವವರಲ್ಲಿ ವೀರ್ಯಾಣು ಉತ್ಪಾದನೆ ಉತ್ತಮವಾಗಿರುತ್ತಂತೆ. ಈ ಸಮಯದಲ್ಲಿ ಆರೋಗ್ಯಯುತ ವೀರ್ಯಾಣು ಉತ್ಪಾದನೆಯಾಗಿ ಅಂಡಾಣುವನ್ನ ಫಲವತ್ತತೆಗೊಳಿಸುವ ಸಾಮರ್ಥ್ಯ ಹೊಂದಿರುತ್ತಂತೆ.

19 ಗಂಟೆ ಬಳಿಕ ನಿದ್ದೆ ಮಾಡುವವರ ವೀರ್ಯಾಣು ಪ್ರಮಾಣದಲ್ಲಿ ಕುಸಿದಿರುವ ಜೊತೆಗೆ ಕಳಪೆಯಾಗಿರುತ್ತಂತೆ. ಬಹುಬೇಗ ಆ ವೀರ್ಯಾಣು ನಶಿಸಿಹೋಗುತ್ತಂತೆ. ಹೀಗಾಗಿ, ಫಲವತ್ತತೆಯ ಪ್ರಮಾಣ ಕಡಿಮೆ ಇರುತ್ತಂತೆ. 6 ಗಂಟೆಗೂ ಕಡಿಮೆ ಮಾಡುವ ನಿದ್ದೆಯೂ ವೀರ್ಯಾಣು ಉತ್ಪಾದನೆ ಮೇಲೆ ಮತ್ತಷ್ಟು ಕ್ಷೀಣವಾಗುತ್ತಂತೆ.

ರಾತ್ರಿ ಲೇಟಾಗಿ ನಿದ್ರೆಗೆ ಹೋಗುವುದು, ಅಸಮರ್ಪಕ ವಿಶ್ರಾಂತಿ ದೇಹದಲ್ಲಿ ಆಂಟಿಸ್ಪರ್ಮ್ ಆಂಟಿಬಾಡಿ ಉತ್ಪಾದನೆಗೆ ಕಾರಣವಾಗುತ್ತಂತೆ. ಈ ಆಂಟಿಸ್ಪರ್ಮ್ ಆಂಟಿಬಾಡಿ ಸ್ಪರ್ಮ್ ಆರೋಗ್ಯಯುತ ವೀರ್ಯಾಣುವನ್ನೂ ಹಾಳುಮಾಡುತ್ತೆ ಎನ್ನುತ್ತಿದೆ ಚೀನಾದ ಹರ್ಬಿನ್ ಮೆಡಿಕಲ್ ಯೂನಿವರ್ಸಿಟಿಯ ಸಂಶೋಧನಾ ವರದಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ