ಧೂಮಪಾನ ಶಿಶ್ನದ ಗಾತ್ರ ಕಡಿಮೆ ಮಾಡುತ್ತದೆಯೇ?

ಶನಿವಾರ, 6 ಜುಲೈ 2019 (11:27 IST)
ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ನಾನು ಧೂಮಪಾನ ಮಾಡುತ್ತೇನೆ. ಮುಂದಿನ ತಿಂಗಳು ನಾನು ಮದುವೆಯಾಗಲಿದ್ದೇನೆ. ಆದರೆ ಪೋರ್ನ್ ಚಿತ್ರಗಳಲ್ಲಿ ತೋರಿಸಿರುವುದಕ್ಕೆ ಹೋಲಿಸಿದರೆ ನನ್ನ ಶಿಶ್ನ ಚಿಕ್ಕದಾಗಿದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ನನ್ನ ಹೆಂಡತಿಗೆ ತೃಪ್ತಿ ಪಡಿಸಲು ನನಗೆ ಸಾಧ್ಯವಾಗುತ್ತದೆಯೇ? ಎಂಬುದು ನನ್ನ ಚಿಂತೆಯಾಗಿದೆ. ಧೂಮಪಾನ ಶಿಶ್ನದ ಗಾತ್ರ ಕಡಿಮೆ ಮಾಡುತ್ತದೆ ಎಂದು ನಾನು ಓದಿದ್ದೇನೆ. ಇದು ನಿಜನಾ? ಈ ಸ್ಥಿತಿಯನ್ನು ಸುಧಾರಿಸಲು ನಾನು ಏನು ಮಾಡಬೇಕು?



ಶಿಶ್ನದ ಗಾತ್ರ ಹಾಗೂ ಧೂಮಪಾನಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ಸಿಗರೇಟ್ ನಲ್ಲಿರುವ ನಿಕೋಟಿನ್ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಆದ್ದರಿಂದ ನೀವು ಧೂಮಪಾನ ನಿಲ್ಲಿಸುವುದು ಉತ್ತಮ. ಹಾಗೇ ನಿಮ್ಮ ಶಿಶ್ನದ ಗಾತ್ರ ಮಾತ್ರವಲ್ಲದೇ ನಿಮ್ಮ ವೈವಾಹಿಕ ಜೀವನವನ್ನು ಸಂತೋಷವಾಗಿರಿಸಲು ಸಹಾಯ ಮಾಡುವಂತಹ ಇತರ ವಿಷಯಗಳ ಬಗ್ಗೆ ಚರ್ಚಿಸಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ. ಹಾಗೇ ಈ ವಿಷಯಗಳ ಬಗ್ಗೆ ಇನ್ನು ಹೆಚ್ಚು ತಿಳಿಯಲು ಲೈಂಗಿಕತೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ