ಜೀರ್ಣಕ್ರಿಯೆ ಸಮಸ್ಯೆಗೆ ಕಲ್ಲು ಸಕ್ಕರೆ ಬೆಸ್ಟ್!

ಸೋಮವಾರ, 8 ನವೆಂಬರ್ 2021 (08:50 IST)
ಕಲ್ಲು ಸಕ್ಕರೆ ತನ್ನಿರೋ ಎನ್ನುವ ದಾಸರ ಪದವೇ ಇದೆ. ಇಂತಹ ಕಲ್ಲು ಸಕ್ಕರೆಯ ಸಣ್ಣ ಸಣ್ಣ ತುಂಡುಗಳನ್ನು ಹೋಟೆಲ್ ನಲ್ಲಿ ಊಟವಾದ ಬಳಿಕ ಸೋಂಪಿನ ಜತೆಗೆ ನೀಡುವರು.
ಇದು ಜೀರ್ಣಕ್ರಿಯೆಗೆ ತುಂಬಾ ಲಾಭಕಾರಿ ಮತ್ತು ಬಾಯಿಗೆ ಸುವಾಸನೆ ಕೂಡ ನೀಡುವುದು.
ಕೆಮ್ಮು ಮತ್ತು ಗಂಟಲಿನ ನೋವು
ಈ ಸಿಹಿ ಸಕ್ಕರೆಯು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ಕೆಮ್ಮು ಮತ್ತು ಗಂಟಲು ನೋವನ್ನು ಶಮನ ಮಾಡುವುದು.
ಕಲ್ಲು ಸಕ್ಕರೆಯನ್ನು ಕರಿಮೆಣಸಿನ ಜತೆಗೆ ಸೇರ್ಪಡೆ ಮಾಡಿಕೊಂಡು, ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಪೇಸ್ಟ್ ಮಾಡಿ. ಇದನ್ನು ರಾತ್ರಿ ವೇಳೆ ಮಾಡಿ.
ಹಿಮೋಗ್ಲೋಬಿನ್ ಮಟ್ಟ ಹೆಚ್ಚಳ
ಹಿಮೋಗ್ಲೋಬಿನ್ ಮಟ್ಟವು ಕಡಿಮೆ ಇದ್ದರೆ ಅದರಿಂದ ರಕ್ತಹೀನತೆ, ಪೇಲವ ಚರ್ಮ, ನಿಶ್ಯಕ್ತಿ, ಬಳಲಿಕೆ ಕಂಡುಬರುವುದು. ಕಲ್ಲುಸಕ್ಕರೆ ಸೇವನೆ ಮಾಡಿದರೆ ಅದರಿಂದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುವುದು. ಇದು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸುವುದು.
ಜೀರ್ಣಕ್ರಿಯೆಗೆ ಸಹಕಾರಿ
ಇದನ್ನು ಮೌಥ್ ಪ್ರೆಶ್ನರ್ ಆಗಿ ಬಳಕೆ ಮಾಡುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಗೂ ಇದು ತುಂಬಾ ಸಹಕಾರಿ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯು ತಕ್ಷಣವೇ ಆಗುವಂತೆ ಮಾಡುವುದು. ಇದರಿಂದ ಊಟದ ಬಳಿಕ ಕಲ್ಲುಸಕ್ಕರೆ ಸೇವನೆ ಮಾಡಿ.
ಶಕ್ತಿವೃದ್ಧಿ
ಇದನ್ನು ಸೇವನೆ ಮಾಡಿದರೆ ಅದು ಊಟದ ಬಳಿಕ ತೃಪ್ತಿ ನೀಡುವುದು. ಇದನ್ನು ಸೇವನೆ ಮಾಡಿದರೆ, ದೇಹಕ್ಕೆ ಶಕ್ತಿ ನೀಡುವುದು. ಇದನ್ನು ಸೋಂಪಿನ ಜತೆಗೆ ಸೇವನೆ ಮಾಡಿದರೆ ಅದರಿಂದ ಮನಸ್ಥಿತಿಯು ಉತ್ತಮವಾಗುವುದು.
ಕಲ್ಲುಸಕ್ಕರೆಯು ತಕ್ಷಣವೇ ಮೂಗಿನ ರಕ್ತಸ್ರಾವವನ್ನು ತಡೆಯುವುದು. ಕಲ್ಲು ಸಕ್ಕರೆಯನ್ನು ನೀರಿಗೆ ಹಾಕಿದ ಬಳಿಕ ಅದು ಕರಗಿದರೆ ಅದರ ಕೆಲವು ಹನಿಯನ್ನು ಮೂಗಿಗೆ ಹಾಕಿದರೆ ಆಗ ಮೂಗಿನ ರಕ್ತಸ್ರಾವವು ನಿಲ್ಲುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ