ಶುಂಠಿ ಚಹಾದ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ಭಾನುವಾರ, 7 ನವೆಂಬರ್ 2021 (08:24 IST)
ಚಹಾಗಳಲ್ಲಿ ವಿಭಿನ್ನ ತರನಾದ ರುಚಿಗಳನ್ನು ನಾವೆಲ್ಲ ಸವಿದಿರುತ್ತೇವೆ. ಪ್ರದೇಶವಾರು ಒಂದೊಂದು ತರನಾದ ಚಹಾಗಳು ಅಲ್ಲಲ್ಲಿ ವೈಶಿಷ್ಟ್ಯತೆ ಪಡೆದಿರುತ್ತವೆ.
ಈ ಚಹಾ ತುಂಬಾ ಇಷ್ಟ ಪಟ್ಟು ಸವಿಯುವುದು ಹೌದು! ಇಂತಹ ಚಹಗಳಲ್ಲಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಚಹಾ ಎಂದರೆ ಅದು ಶುಂಠಿ ಚಹಾ ಇದರ ಪ್ರಯೋಜನಗಳು ಹೆಚ್ಚು. ಇದನ್ನು ಕುಡಿದರೆ ದೇಹಕ್ಕೆ ಅಷ್ಟೇ ಅಲ್ಲ ಮನಸ್ಸಿಗೂ ಮುಧ ನೀಡುತ್ತದೆ.
ಸಾಮಾನ್ಯವಾಗಿ ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಸವಿಯುವ ಅಭ್ಯಾಸ. ಅದರಲ್ಲಿಯೂ ಮುಖ್ಯವಾಗಿ ಕೆಲವರು ಶುಂಠಿ ಚಹಾವನ್ನು ಹೆಚ್ಚು ಇಷ್ಟಪಡುತ್ತಾರೆ. ಅಡುಗೆಯಲ್ಲಿ ರುಚಿ ಹೆಚ್ಚುಸುವ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿರುವ ಶುಂಠಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಶುಂಠಿ ವಿಟಮಿನ್ ಸಿ ಅಂಶ, ಮೆಗ್ನೀಶಿಯಮ್ ಮತ್ತು ಇತರ ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ನಮ್ಮ ದೇಹ ಸದೃಢವಾಗಿರಲು ಅವಶ್ಯಕವಾದ ಖನಿಜಾಂಶಗಳು. ಹಾಗಿರುವಾಗ ನಿಮ್ಮ ಆಹಾರದಲ್ಲಿ ಶುಂಠಿ ಸೇರಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.
ಶುಂಠಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಶುಂಠಿಯಲ್ಲಿರುವ ಜಿಂಜರಾಲ್ ಮತ್ತು ಜಿಂಜರೋನ್ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದು ರಕ್ತನಾಳಗಳಲ್ಲಿ ಉಂಟಾಗುವ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲ ಶುಂಠಿ ಜೀರ್ಣ ಕ್ರಿಯೆಗೂ ಸಹಾಯಕ. ವಾಕರಿಗೆ ಮತ್ತು ಆಯಾಸಕ್ಕೆ ಒಂದು ಕಪ್ ಶುಂಠಿ ಚಹಾವನ್ನು ಕುಡಿಯುವುದು ಒಳ್ಳೆಯ ಪರಿಹಾರ ನೀಡುತ್ತದೆ.
ಮಧುಮೇಹಿಗಳಿಗೆ ಶುಂಠಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ. ಶುಂಠಿ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ ಚಹಾವು ತುಂಬಾ ಉಪಯುಕ್ತವಾಗಿದೆ. ಹೊಟ್ಟೆಯಲ್ಲಿ ಉಂಟಾಗುವ ಕಿರಿಕಿರಿ, ನೋವು, ಒತ್ತಡ ಜೊತೆಗೆ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ