ಮಶ್ರೂಮ್ ಆರೋಗ್ಯಕ್ಕೆ ಎಷ್ಟು ಉಪಯುಕ್ತ ತಿಳಿಯಿರಿ

ಭಾನುವಾರ, 7 ನವೆಂಬರ್ 2021 (15:18 IST)
ಮಶ್ರೂಮ್ ನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಅದರಿಂದ ಯಾವೆಲ್ಲಾ ರೀತಿಯ ಲಾಭಗಳೂ ಸಿಗುವುದು.
ಮಶ್ರೂಮ್ ನಲ್ಲಿ ಹಲವಾರು ಬಗೆ ವಿಟಮಿನ್ ಗಳು ಹಾಗೂ ಖನಿಜಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
ಮಶ್ರೂಮ್ ಸೇವನೆ ಮಾಡಿದರೆ ಅದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿ ಇನ್ನಿತರ ಐದು ರೀತಿಯ ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ.
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ
ಮಶ್ರೂಮ್ ನಿಂದ ದೇಹಕ್ಕೆ ಪ್ರೋಟೀನ್ ಲಭ್ಯವಾಗುವುದು ಮತ್ತು ಇದರಲ್ಲಿ ಯಾವುದೇ ರೀತಿಯ ಕೊಲೆಸ್ಟ್ರಾಲ್ ಅಥವಾ ಕೊಬ್ಬು ಇಲ್ಲ, ಅದೇ ರೀತಿಯಲ್ಲಿ ಕಾರ್ಬೋಹೈಡ್ರೇಟ್ಸ್ ತುಂಬಾ ಕಡಿಮೆ ಇದೆ. ನಾರಿನಾಂಶ ಮತ್ತು ಕೆಲವೊಂದು ರೀತಿಯ ಕಿಣ್ವಗಳು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು.
ರಕ್ತಹೀನತೆ
ರಕ್ತಹೀನತೆ ಇರುವ ಜನರಲ್ಲಿ ದೇಹದಲ್ಲಿ ಕಬ್ಬಿಣಾಂಶವು ತುಂಬಾ ಕಡಿಮೆ ಇರುವುದು. ಇದರ ಪರಿಣಾಮವಾಗಿ ನಿಶ್ಯಕ್ತಿ, ಬಳಲಿಕೆ, ತಲೆನೋವು, ನರದ ಸಮಸ್ಯೆ ಇತ್ಯಾದಿಗಳು ಕಾಡುವುದು. ಮಶ್ರೂಮ್ ಸೇವನೆ ಮಾಡಿದರೆ ಅದರಲ್ಲಿ ಒಳ್ಳೆಯ ಪ್ರಮಾಣದ ನಾರಿನಾಂಶವಿದ್ದು, ಅದರಲ್ಲಿ ಇರುವಂತಹ ಶೇ.90ರಷ್ಟು ಕಬ್ಬಿಣಾಂಶವನ್ನು ದೇಹವು ಹೀರಿಕೊಳ್ಳುವುದು. ಇದರಿಂದ ದೇಹದಲ್ಲಿ ಕೆಂಪು ರಕ್ತದ ಕಣಗಳು ಉತ್ಪತ್ತಿ ಆಗುವುದು ಮತ್ತು ದೇಹದ ಆರೋಗ್ಯವು ಉತ್ತಮವಾಗಿ ಇರುವುದು.
ಸ್ತನ ಕ್ಯಾನ್ಸರ್
ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ತಡೆಯಲು ಮಶ್ರೂಮ್ ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಬೀಟಾ-ಗ್ಲುಕಾನ್ಸ್ ಮತ್ತು ಸಂಯೋಜಿತ ಲಿನೋಲಿಕ್ ಆಮ್ಲ ಅಂಶವು ಕ್ಯಾನ್ಸರ್ ವಿರೊಧಿಯಾಗಿದೆ. ಇದರಲ್ಲಿ ಲಿನೋಲಿಕ್ ಆಮ್ಲವು ಅತಿಯಾದ ಈಸ್ಟ್ರೋಜನ್ ಪ್ರಭಾವವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿ.
ಋತುಬಂಧದ ಬಳಿಕ ಈಸ್ಟ್ರೋಜನ್ ಮಟ್ಟವು ಏರಿಕೆ ಆಗುವುದು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರಲು ಪ್ರಮುಖ ಕಾರಣ. ಬೀಟಾ ಗ್ಲುಕಾನ್ಸ್ ಪ್ರಾಸ್ಟೇಟ್ ಕ್ಯಾನ್ಸರ್ ನಲ್ಲಿ ಕ್ಯಾನ್ಸರ್ ಕಾರಕ ಕೋಶಗಳು ಬೆಳೆಯದಂತೆ ತಡೆಯುತ್ತದೆ.
ಮಧುಮೇಹ
ಮಧುಮೇಹಿಗಳಿಗೆ ಮಶ್ರೂಮ್ ತುಂಬಾ ಒಳ್ಳೆಯದು. ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ, ತುಂಬಾ ಕಡಿಮೆ ಕಾರ್ಬೋಹೈಡ್ರೇಟ್ಸ್, ಅಧಿಕ ಪ್ರೋಟೀನ್ ಹೊಂದಿರುವ ಹಾಗೂ ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಇದು ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ