ನವಣೆಯ ಸಿಹಿ ಪೊಂಗಲ್ ಸವಿದು ನೋಡಿ

ಶನಿವಾರ, 27 ಫೆಬ್ರವರಿ 2021 (16:32 IST)
ಬೆಂಗಳೂರು:ಸಿರಿಧಾನ್ಯವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದನ್ನು ಬಳಸಿ ರುಚಿಕರವಾದ ಪೊಂಗಲ್ ಮಾಡವ ವಿಧಾನ ಇಲ್ಲಿದೆ.

ಬೇಕಾದ ಸಾಮಗ್ರಿಗಳು:
2 ಬಟ್ಟಲು ನವಣೆ, 1 ಬಟ್ಟಲು ಹೆಸರುಬೇಳೆ ,3 ಬಟ್ಟಲು ಬೆಲ್ಲ , ಏಲಕ್ಕಿ ಪುಡಿ,2 ಚಮಚ ತುಪ್ಪ , ದ್ರಾಕ್ಷಿ , ಗೋಡಂಬಿ,1/2 ಬಟ್ಟಲು ಹಸಿ ತೆಂಗಿನ ತುರಿ.

ಮಾಡುವ ವಿಧಾನ :  ಮೊದಲಿಗೆ ನವಣೆ ಮತ್ತು ಹೆಸರು ಬೇಳೆಯನ್ನು ಬೇರೆ ಬೇರೆಯಾಗಿ ಹುರಿದುಕೊಂಡು ನಂತರ ತೊಳೆದು ಕುಕ್ಕರಲ್ಲಿ ಹಾಕಿ ಒಂದು ಅಳತೆಗೆ ನಾಲ್ಕು ಅಳತೆ ನೀರನ್ನು ಹಾಕಿ ಒಂದು ವಿಷಲ್ ಕೂಗಿಸಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ  ಗ್ಯಾಸ್ ಆಫ್ ಮಾಡಿ .  ತೆಂಗಿನ ತುರಿ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ  ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಅದು ಮುಳುಗುವಷ್ಟ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ರುಬ್ಬಿದ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ಗಟ್ಟಿ ಎನಿಸಿದರೆ ಸ್ವಲ್ಪ ಬಿಸಿ ನೀರು ಸೇರಿಸಿಕೊಳ್ಳಿ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ ಮೇಲೆ ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿದರೆ  ನವಣೆಯ ಪೊಂಗಲ್ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ