ಬೆಂಗಳೂರು:ಬೆಳಿಗ್ಗಿನ ತಿಂಡಿಗೆ ರುಚಿ ರುಚಿಯಾದ ಪಲಾವ್ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು 1ಕೆಜಿ ಅಕ್ಕಿ ,100ಗ್ರಾಂ ಬೀನ್ಸ್, 100ಗ್ರಾಂ ಕ್ಯಾರಟ್, 1ಕಪ್ ಬಟಾಣಿ, 2 ಟೊಮೇಟೊ, 1 ರಿಂದ 2 ಬಟಾಟೆ, 1ರಿಂದ 2 ಗಡ್ಡೆ ಬೆಳ್ಳುಳ್ಳಿ, 2 ರಿಂದ 3 ಈರುಳ್ಳಿ, 2 ರಿಂದ 3 ಹಸಿಮೆಣಸು, ಚಕ್ಕೆ, ಏಲಕ್ಕಿ, ಪಲಾವ್ ಎಲೆ,ರುಚಿಗೆ ತಕ್ಕಷ್ಟು ಉಪ್ಪು .
ಮಾಡುವ ವಿಧಾನ: ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದು ಬಿಸಿಯಾದ ನಂತರ ಅದಕ್ಕೆ ಚಕ್ಕೆ ಏಲಕ್ಕಿ ಪಲಾವ್ ಎಲೆ ಹಾಕಿ ನಂತರ ಕಟ್ಟು ಮಾಡಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಬೇಕು ಅದು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಬೇಕು ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸು, ಬಟಾಣಿ ಕಾಳನ್ನು ಹಾಕಬೇಕು ನಂತರ ಕಟ್ಟು ಮಾಡಿದ ತರಕಾರಿಗಳನ್ನು ಹಾಕಿ ಕೈ ಆಡಿಸಬೇಕು ನಂತರ ಅದಕ್ಕೆ 1 ಕೆಜಿ ಅಕ್ಕಿಯನ್ನು ತೊಳೆದು ಹಾಕಬೇಕು ಅದಕ್ಕೆ 2 ಲೀಟರ್ ನೀರನ್ನು ಹಾಕಿ ಕೈ ಆಡಿಸಬೇಕು ಕುದಿ ಬಂದ ನಂತರ ಅದಕ್ಕೆ ರುಚಿಗೆ ತಕ್ಕಷ್ಟ್ಟು ಉಪ್ಪು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 3 ವಿಷಲ್ ಬಂದ ಮೇಲೆ ಗ್ಯಾಸ್ ಆಫ್ ಮಾಡಿದರೆ ವೆಜಿಟೇಬಲ್ ಪಲಾವ್ ರೆಡಿ.