ಮೀನುಗಳನ್ನು ಸೇವಿಸುವುದರ ಕುರಿತು ಬಹಳಷ್ಟು ಸಂಶೋಧನೆಗಳು ತಿಳಿಸಿವೆ ಮತ್ತು ಅನೇಕ ಆರೋಗ್ಯ ತಜ್ಞರು ಇದನ್ನು ಮಿದುಳಿನ ಆಹಾರವೆಂದು ತಿಳಿಯಪಡಿಸಿದ್ದಾರೆ. ಜರ್ನಲ್ ಸೈಂಟಿಫಿಕ್ ವರದಿಯ ಅಧ್ಯಯನದ ಪ್ರಕಾರ, ಕನಿಷ್ಠ ಒಂದು ವಾರದಲ್ಲಿ ಮೀನುಗಳನ್ನು ತಿನ್ನುವ ಮಕ್ಕಳು ಹೆಚ್ಚಿನ ಐಕ್ಯೂ ಅನ್ನು ಹೊಂದಿರುತ್ತಾರೆ ಮತ್ತು ಉತ್ತಮ ನಿದ್ರೆಯನ್ನು ಅನುಭವಿಸುತ್ತಾರೆ ಎಂದು ತಿಳಿಸಿದೆ.
ಈ ಅಧ್ಯಯನವನ್ನು ಚೀನೀ ಮಕ್ಕಳ ಮೇಲೆ ನಡೆಸಲ್ಪಟ್ಟಿದ್ದರೂ, ಸಂಶೋಧಕರು ಪ್ರಕಾರ, ಅಮೇರಿಕನ್ ಮಕ್ಕಳು ಮೀನುಗಳನ್ನು ತಿನ್ನುವುದರಿಂದ ಆರೋಗ್ಯದ ಪ್ರಯೋಜನವನ್ನು ಪಡೆಯುತ್ತಾರೆ, ಆದರೆ ಅವರು ತಮ್ಮ ಆಹಾರಕ್ರಮವನ್ನು ಮಾರ್ಪಡಿಸಿದರೆ ಮಾತ್ರ. ಮೀನು ಸೇವೆನಯಿಂದ ಹೆಚ್ಚಿನ ಐಕ್ಯೂ ಮತ್ತು ಉತ್ತಮ ನಿದ್ರೆಗೆ ಸಹಾಕವಾಗುತ್ತದೆ ಎಂದು ಅಧ್ಯಯನವು ಸಾಬೀತುಪಡಿಸಿದೆ.
ಸಂಶೋಧನೆಗೆ, ಸಂಶೋಧಕರ ತಂಡವು ಚೀನಾದಲ್ಲಿ 9 ರಿಂದ 11 ವರ್ಷ ವಯಸ್ಸಿನ 500 ಕ್ಕೂ ಹೆಚ್ಚು ಗಂಡು ಮತ್ತು ಹೆಣ್ಣು ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಕಳೆದ ತಿಂಗಳು ಮೀನನ್ನು ಸೇವನೆ ಮಾಡಿರುವುದರ ಕುರಿತು ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಮಕ್ಕಳಿಗೆ ಚೀನೀಯ ಐಕ್ಯೂ ಪರೀಕ್ಷೇಗೂ ಒಳಪಡಿಸಲಾಯಿತು ಅದು ಆ ಮಕ್ಕಳ ಮೌಖಿಕ ಮತ್ತು ಅಮೌಖಿಕ ಕೌಶಲ್ಯಗಳ ಗುಣಲಕ್ಷಣಗಳ ಫಲಿತಾಂಶವನ್ನು ತಿಳಿಯಪಡಿಸಿತು. ಹೆಚ್ಚುವರಿಯಾಗಿ, ಮಕ್ಕಳ ಪೋಷಕರು ಸಹ ತಮ್ಮ ಮಕ್ಕಳ ನಿದ್ರೆಯ ಸಮಯ ಮತ್ತು ಅವರ ಅನುಭವದ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಮಾಹಿತಿಯು ಮಕ್ಕಳು ಎಷ್ಟು ಹೊತ್ತು ನಿದ್ದೆ ಮಾಡುತ್ತಾರೆ, ಮಧ್ಯ ರಾತ್ರಿ ಎಷ್ಟು ಬಾರಿ ಏಳುತ್ತಾರೆ ಮತ್ತು ಅವರು ಹಗಲಲ್ಲಿ ಮಲಗುತ್ತಾರೆಯೇ ಎಂಬುದನ್ನು ಒಳಗೊಂಡಿದೆ.
ಸಂಶೋಧಕರ ಪ್ರಕಾರ, ಇದಲ್ಲದೆ ಆರೋಗ್ಯಕರ ಸಮತೋಲಿತ ಆಹಾರ ಕ್ರಮ, ಸಾಕಷ್ಟು ವ್ಯಾಯಾಮ ಮತ್ತು ಸೀಮಿತ ಕಂಪ್ಯೂಟರ್ ಮತ್ತು ಮೊಬೈಲ್‌ನ ಬಳಕೆ ಎಲ್ಲಾ ಮಕ್ಕಳಿಗೆ ಉತ್ತಮವಾದ ನಿದ್ರೆಯನ್ನು ತರುತ್ತದೆ ಮತ್ತು ಶಾಲೆಯಲ್ಲಿ ಹೆಚ್ಚು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.