ಬಾಯಲ್ಲಿ ನೀರೂರಿಸುವ ಕುಂದಾಪುರ ಶೈಲಿಯ ಬಾಂಗಡೆ ಮೀನು ಸಾರು

ಭಾನುವಾರ, 17 ಡಿಸೆಂಬರ್ 2017 (17:26 IST)
ಕುಂದಾಪುರ: ಹೆಚ್ಚಿನ ಜನರು ಮೀನು ಸಾರು, ಫೈ ಅಂದ್ರೆ ತುಂಬಾ ಇಷ್ಟ ಪಡುತ್ತಾರೆ. ಅದರಲ್ಲೂ ಬಾಂಗಡೆ ಮೀನು ಸಾರನ್ನು ಎಂದ ತಕ್ಷಣವೇ ಊಟ ಮಾಡಬೇಕು ಅಂತ ಅನಿಸುತ್ತದೆ. ಬಾಂಗಡೆ ಮೀನಿನ ಸಾರು ಮಾಡುವ ಬಗೆ ಇಲ್ಲಿದೆ ಓದಿ.


ಬೇಕಾಗುವ ಸಾಮಾಗ್ರಿಗಳು:
ದನಿಯಾ-3 ಚಮಚ, ಕಾಳು ಮೆಣಸು-11/2 ಚಮಚ, ಸಾಸಿವೆ- ¼ ಚಮಚ, ಮೆಂತ್ಯ- ¼ ಚಮಚ, ಓಂ ಕಾಳು-1/4 ಚಮಚ, ಬ್ಯಾಡಗಿಮೆಣಸು- 12, ಈರುಳ್ಳಿ-1, ಬೆಳ್ಳುಳ್ಳಿ-6 ಎಸಳು, ಹುಣಸೆಹಣ್ಣು(ಹುಳಿ ಎಷ್ಟು ಬೇಕೊ ಅಷ್ಟು) , ಅರಶಿನ-1/4 ಚಮಚ, ತೆಂಗಿನ ಕಾಯಿ ತುರಿ-2 ಕಪ್, ½ ಕೆಜಿ ಬಾಂಗಡೆ ಮೀನು(ಪೀಸ್ ಮಾಡಿ ತೊಳೆದು ಇಟ್ಟುಕೊಂಡಿರಬೇಕು).


ಮಾಡುವ ವಿಧಾನ:
ಮೊದಲು ದನಿಯಾ, ಕಾಳು ಮೆಣಸು, ಸಾಸಿವೆ, ಮೆಂತ್ಯ, ಓಂ ಕಾಳು, ಬ್ಯಾಡಗಿಮೆಣಸು ಇವುಗಳನ್ನು ಬೇರೆ ಬೇರೆಯಾಗಿ ಹುರಿಯಬೇಕು. ನಂತರ ಇವುಗಳ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ , ಹುಣಸೆಹಣ್ಣು , ಅರಶಿನ, ತೆಂಗಿನ ಕಾಯಿ ತುರಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಬೇಕು. ನಂತರ ರುಬ್ಬಿದ ಮಸಾಲಕ್ಕೆ  ಸ್ವಲ್ಪ ನೀರು ಹಾಕಿ ಹದಮಾಡಿಕೊಳ್ಳಬೇಕು(ಮಸಾಲೆ ಹದಮಾಡಿದ್ದು ತುಂಬಾ ನೀರಾಗಬಾರದು) ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು, ಬೇಕಾದಲ್ಲಿ ಹುಣಸೆಹಣ್ಣಿನ ರಸ ಹಾಕಿಕೊಳ್ಳಬಹುದು. ನಂತರ ಇದನ್ನು ಚೆನ್ನಾಗಿ ಕುದಿಸಿ ಆಮೇಲೆ  ಇದಕ್ಕೆ ಮೀನು ಹಾಕಿ 5 ನಿಮಿಷ ಕುದಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ