ದಿನ ಬಿಸಿ ನೀರು ಸೇವಿಸಿ ಈ ಲಾಭಗಳನ್ನು ಪಡೆದುಕೊಳ್ಳಿ

ಸೋಮವಾರ, 19 ಅಕ್ಟೋಬರ್ 2020 (07:24 IST)
ಬೆಂಗಳೂರು : ಬಿಸಿ ನೀರು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಹಾಗಾದ್ರೆ ಬಿಸಿ ನೀರನ್ನು ಕುಡಿಯುವುದರಿಂದ ಏನು ಪ್ರಯೋಜನ ಎಂಬುದನ್ನು ತಿಳಿದುಕೊಳ್ಳಿ.

ದೇಹದಲ್ಲಿರುವ ವಿಷಕಾರಕ ವಸ್ತುಗಳು ನಮ್ಮ ತ್ವಚೆಯು ಬೇಗ ಮುಪ್ಪಾದಂತೆ ಕಾಣುವ ಹಾಗೇ ಮಾಡುತ್ತದೆ. ಬಿಸಿ ನೀರನ್ನು ಸೇವಿಸುವುದರಿಂದ ಅಕಾಲಿಕ ಮುಪ್ಪನ್ನು ತಡೆಯುತ್ತದೆ. ಬಿಸಿ ನೀರಿನ ಸೇವನೆಯಿಂದ ಚರ್ಮದ ಜೀವಕೋಶಗಳ ಸ್ಥಿತಿಸ್ಥಾಪಕತ್ವ ಗುಣ ಜಾಸ್ತಿಯಾಗುತ್ತದೆ. ಇದು ಚರ್ಮವು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ಮೊಡವೆಗೆ ಕಾರಣವಾದ ವಿಷ ಪದಾರ್ಥಗಳನ್ನು ಹೊರಹಾಕುತ್ತದೆ.

ಬಿಸಿ ನೀರಿನ ಸೇವನೆಯಿಂದ ಕೂದಲಿನ ಬುಡಕ್ಕೆ ಒಳ್ಳೆಯ ರಕ್ತ ಸಂಚಲನೆಯಾಗಿ ನಿಮ್ಮ ಕೂದಲು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಕರುಳಿನ ಆರೋಗ್ಯ ಕಾಪಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ