ಬೆಂಗಳೂರು : ಆಲೂಗಡ್ಡೆ ಉತ್ತಮ ಪ್ರಮಾಣದ ಫೈಬರ್ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.
ಹೌದು. ಆಲೂಗಡ್ಡೆ ಹಾಗೂ ಸಂಸ್ಕರಿಸಿದ ಆಲೂಗಡ್ಡೆ ಚಿಪ್ಸ್ ತೂಕ ಹೆಚ್ಚಾಗುವಲ್ಲಿ ಸಹಕಾರಿಯಾಗಿದೆ. ಮಿತವಾಗಿ ಮತ್ತು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದಾಗ ಯಾವುದೇ ಅಡ್ಡಪರಿಣಾಮಗಳು ಎದುರಾಗುವುದಿಲ್ಲ.
ಕೆಲವು ಅಧ್ಯಯನಗಳು ಆಲೂಗಡ್ಡೆ ಮತ್ತು ಆಲೂಗಡ್ಡೆ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ ಎಂದು ಸಾಭೀತು ಪಡಿಸಿದೆ. ಅಲ್ಲದೇ ಸಂಶೋಧನೆಯ ಪ್ರಕಾರ ಮಹಿಳೆಯರ ಅಧಿಕ ತೂಕ ಹಾಗೂ ಸೊಂಟದ ಸುತ್ತಳತೆ ಹೆಚ್ಚಲು ಆಲೂಗಡ್ಡೆ ಸಹ ಮೂಲಕಾರಣವಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ