ಬೆನ್ನು ಮತ್ತು ಕಾಲಿನ ಅಡಿ ನೋವು ಬರುತ್ತಿದ್ದರೆ ಗುಣಪಡಿಸಲು ಟೆನಿಸ್ ಬಾಲ್ ಸಾಕು

Krishnaveni K

ಭಾನುವಾರ, 14 ಜುಲೈ 2024 (15:18 IST)
Photo Credit: Facebook
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿಯಿಂದಾಗಿ ಬಹುತೇಕ ಮಂದಿ ಬೆನ್ನು ನೋವು, ಕಾಲಿನ ಮಾಂಸ ಖಂಡಗಳ ನೋವಿನಿಂದ ಬಳುತ್ತಾರೆ. ಇದನ್ನು ಗುಣಪಡಿಸಲು ನಮಗೆ ಕೇವಲ ಒಂದು ಟೆನಿಸ್ ಬಾಲ್ ಸಾಕು ಎಂದರೆ ನೀವು ನಂಬಲೇಬೇಕು.

ಸುದೀರ್ಘ ಹೊತ್ತು ಕೂತು ಕೆಲಸ ಮಾಡುವವರಲ್ಲಿ ಬೆನ್ನು, ಸೊಂಟ ನೋವು ಸಾಮಾನ್ಯವಾಗಿರುತ್ತದೆ. ಅದೇ ರೀತಿ ಭಾರ ಎತ್ತುವ ಕೆಲಸ ಮಾಡುವವರಿಗೂ ಬೆನ್ನು ನೋವು ಸಹಜ. ಅದೇ ರೀತಿ ತುಂಬಾ ಹೊತ್ತು ನಿಂತು ಕೆಲಸ ಮಾಡುವವರಿಗೆ ಅಥವಾ ದೈಹಿಕವಾಗಿ ಶ್ರಮದಾಯಕ ಕೆಲಸ ಮಾಡುವವರಿಗೆ ಕಾಲಿನ ಮಾಂಸಖಂಡಗಳಲ್ಲಿ ನೋವು ಕಂಡುಬರುತ್ತದೆ.

ಇದನ್ನು ಗುಣಪಡಿಸಲು ನಾವು ಔಷಧಿ ಜೊತೆಗೆ ಕೆಲವೊಂದು ಸರಳ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಬೆನ್ನು ನೋವು, ಕೀಲು ನೋವು, ಮಾಂಸಖಂಡಗಳ ನೋವಿಗೆ ವ್ಯಾಯಾಮ ಸರಳ ಮದ್ದು. ಈ ರೀತಿ ವ್ಯಾಯಾಮ ಮಾಡುವಾಗ ಟೆನಿಸ್ ಬಾಲ್ ಒಂದರ ಸಹಾಯದಿಂದ ವ್ಯಾಯಾಮ ಮಾಡಿದರೆ ಮಾಂಸಖಂಡಗಳು ಬಲಗೊಳ್ಳುತ್ತವೆ ಮತ್ತು ನೋವು ನಿವಾರಣೆಯಾಗುತ್ತದೆ.

ಒಂದು ಟೆನಿಸ್ ಬಾಲ್ ತೆಗೆದುಕೊಂಡು ಪಾದದ ಕೆಳಗೆ ಹಾಕಿ ನಿಧಾನವಾಗಿ ತುಳಿಯುತ್ತಿರಿ. ಸಮತಟ್ಟಾದ ನೆಲದ ಮೇಲೆ ಬಾಲ್ ಇಟ್ಟು ಅದರ ಮೇಲೆ ಪಾದವನ್ನು ಇಟ್ಟು ಅದರ ಮೇಲೆ ಉರುಳಿಸುತ್ತಾ ಇರಿ. ಈ ರೀತಿ ಮಾಡುವುದರಿಂದ ಮಾಂಸಖಂಡಗಳ ಬಲವರ್ಧನೆಯಾಗುತ್ತದೆ. ಬೆನ್ನು ಮತ್ತು ಮಾಂಸ ಖಂಡಗಳ ನೋವು ಇರುವವರು ಈ ವ್ಯಾಯಾಮ ಮಾಡಿ ನೋಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ