ಸಿಂಪಲ್ಲಾಗಿ ಮೊಸರನ್ನ ತಿನ್ನೋದು ಎಷ್ಟು ಒಳ್ಳೆಯದು ಗೊತ್ತಾ?!

ಮಂಗಳವಾರ, 10 ಜುಲೈ 2018 (09:25 IST)
ಬೆಂಗಳೂರು: ಎಂತಹದ್ದೇ ಮಸಾಲೆ ಊಟ ತಿಂದರೂ ಕೊನೆಗೊಂದಿಷ್ಟು ಮೊಸರನ್ನ ತಿನ್ನೋದು ನಮ್ಮ ಸಂಪ್ರದಾಯ. ಮೊಸರನ್ನ ತಿಂದರೆ ಸಿಗುವ ತೃಪ್ತಿ ಇನ್ಯಾವುದರಲ್ಲೂ ಸಿಗದು.

ಅಷ್ಟಕ್ಕೂ ಈ ಮೊಸರನ್ನ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ? ಮೊಸರಿನಲ್ಲಿರುವ ಅಮಿನೊ ಆಸಿಡ್ ಇದನ್ನು ಒಂದು ಸಂತೃಪ್ತ ಆಹಾರವಾಗಿ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸಿದರೆ ನಮ್ಮ ಉದರ ದೇವರು ತೃಪ್ತನಾಗುತ್ತಾನೆ.

ಇನ್ನು ಅಸಿಡಿಟಿ ಸಮಸ್ಯೆ ಇರುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ಅಷ್ಟೇ ಅಲ್ಲ, ಊಟವಾದ ಮೇಲೆ ಕೊಂಚ ಹೊತ್ತು ಗಡದ್ದಾಗಿ ನಿದ್ರೆ ಮಾಡಬೇಕೆಂದರೆ ಮೊಸರನ್ನ ಸೇವಿಸಿ. ಬೇಗನೆ ನಿದ್ರೆ ಹತ್ತುತ್ತದೆ. ಹಾಗಾಗಿ ಊಟವಾದ ಮೇಲೆ ಮೊಸರನ್ನ ಸೇವಿಸಲು ಮರೆಯದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ