* ಕೈಗಳು ತಣ್ಣಗಾಗುವುದು: ಕೈಗಳು ತಣ್ಣಗಾದರೆ ಆಗ ಸರಿಯಾಗಿ ರಕ್ತ ಪರಿಚಲನೆಯಾಗುತ್ತಿಲವೆನ್ನುವುದರ ಸೂಚನೆಯಾಗಿದೆ. ಹೈಪೋಥೈರಾಯ್ಡಿಸಮ್ ವೇಳೆ ಥೈರಾಯ್ಡ್ ಗ್ರಂಥಿಗಳ ಚಟುವಟಿಕೆಯು ತುಂಬಾ ಕುಗ್ಗಿರುವುದು. ಇದು ಹೊಮೊಸಿಸ್ಟೈನ್ ಗೆ ಸಂಬಂಧಪಟ್ಟಿರುವುದಾಗಿದೆ.
* ಕೈಗಳಲ್ಲಿ ನೆರಿಗೆ: ಹೈಪೋಥೈರಾಯ್ಡಿಸಮ್ ನಿಂದಾಗಿ ಚರ್ಮದ ಮೇಲೆ ನೆರಿಗೆ ಹಾಗೂ ಗೆರೆಗಳು ಕಾಣಿಸಿಕೊಳ್ಳತ್ತದೆ. ಥೈರಾಯ್ಡ್ ಗ್ರಂಥಿಗಳು ಕಾರ್ಯ ನಿರ್ವಹಿಸದೆ ಇರುವ ಕಾರಣದಿಂದಾಗಿ ನಿಮ್ಮ ವಯಸ್ಸು ಹೆಚ್ಚಾದಂತೆ ಕಾಣುವುದು ಮತ್ತು ನೆರಿಗೆ ಕಂಡುಬರುವುದು.
* ಉಗುರು ಹಳದಿಯಾಗುವುದು: ಹೈಪೋಥೈರಾಯ್ಡಿಸಮ್ ನಿಂದ ಬೆರಳಿನ ತುದಿಗಳಿಗೆ ಸರಿಯಾಗಿ ರಕ್ತಸಂಚಾರವಾಗದೆ ಇರುವುದರಿಂದ ಉಗುರು ಹಳದಿಯಾಗಲು ಕಾಣಿಸುವುದು.
* ಉಗುರು ತುಂಡಾಗುವುದು: ಒಬ್ಬ ವ್ಯಕ್ತಿ ಹೈಪೋಥೈರಾಯ್ಡಿಸಮ್ ಇದ್ದರೆ, ಉಗುರುಗಳು ಬಣ್ಣ ಕಳೆದುಕೊಳ್ಳುವುದು ಮಾತ್ರವಲ್ಲದೆ ಇದು ಮೃದುವಾಗಿ ತುಂಡಾಗುವುದು ಮಾತ್ರವಲ್ಲ, ಕೆಲವೊಮ್ಮೆ ಕಿತ್ತು ಬರುವುದು.